ನವದೆಹಲಿ: ಅಪರಿಚಿತ ಹೆಣ್ಣುಮಕ್ಕಳಿಗೆ ಯಾರಾದರೂ ಡಾರ್ಲಿಂಗ್ ಕರೆದರೆ ಅದು ಕ್ರಮಿನಲ್ ಅಪರಾಧಕ್ಕೆ ಸಮನಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.
ನಡೆದಿದ್ದೇನು?: ಪಶ್ಚಿಮ ಬಂಗಾಳದಲ್ಲಿ ಜಾನಕ್ ರಾಮ್ ಎನ್ನುವ ವ್ಯಕ್ತಿ ಕುಡಿದ ಮತ್ತಿನಲ್ಲಿ ,ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಡಾರ್ಲಿಂಗ್ ಎಂದು ಕರೆದಿದ್ದ.
ಅಧೀನ ನ್ಯಾಯಾಲಯದ ತೀರ್ಪನ್ನು ಈಗ ಕೋಲ್ಕೊತಾ ಹೈಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಯಾರು ಕೂಡ ಹೆಣ್ಣುಮಕ್ಕಳನ್ನು ಡಾರ್ಲಿಂಗ್ ಎಂದು ಕರೆಯಬಾರದು ಎಂಬುದಾಗಿಯೂ ಆದೇಶ ಹೊರಡಿಸಿದೆ.
ಮಹಿಳೆಯು ಪೊಲೀಸ್ ಕಾನ್‌ಸ್ಟೆಬಲ್ ಆಗಿರಲಿ, ಸಾಮಾನ್ಯ ಗೃಹಿಣಿಯೇ ಆಗಿರಲಿ, ಅಪರಿಚಿತರು ಆಕೆಯನ್ನು ಡಾರ್ಲಿಂಗ್ ಎಂದು ಕರೆಯುವ ಹಾಗಿಲ್ಲ. ವ್ಯಕ್ತಿಯು ಮದ್ಯಪಾನ ಮಾಡಿರಲಿ ಅಥವಾ ಮಾಡದಿರಲಿ, ಯಾವುದೇ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವಂತಿಲ್ಲ. ಹಾಗೆ ಕರೆಯುವುದು ಕೂಡ ಸೆಕ್ಸುವಲ್ ರಿಮಾರ್ಕ್ ಆಗಿದೆ' ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಅಪರಿಚಿತ ಮಹಿಳೆ ಅಥವಾ ಯುವತಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354 ಎ (ಮಹಿಳೆ ಜತೆ ಅತಿರೇಕದ ವರ್ತನೆ) ಹಾಗೂ 509 (ಹೆಣ್ಣುಮಕ್ಕಳನ್ನು ಚುಡಾಯಿಸುವುದು) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಬೇಕು.ಡಾರ್ಲಿಂಗ್ ಎಂದು ಕರೆಯುವುದು ಕೂಡ ಸೆಕ್ಸುವಲ್ ಹೇಳಿಕೆಯಾಗಿದೆ. ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಯ್ ಸೇನ್‌ಗುಪ್ತಾ ಆದೇಶ ಹೊರಡಿಸಿದ್ದಾರೆ.