HEALTH TIPS

ಆರ್‌ಎಸ್‌ಎಸ್‌ ತರಬೇತಿ: ಪಠ್ಯ, ಹೆಸರಿನಲ್ಲಿ ಪರಿಷ್ಕರಣೆ

           ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ತನ್ನ ವಾರ್ಷಿಕ ತರಬೇತಿ ಕಾರ್ಯಕ್ರಮದ ಪಠ್ಯಕ್ರಮ ಮತ್ತು ಹೆಸರಿನಲ್ಲಿ ಕೆಲ ಬದಲಾವಣೆಗಳನ್ನು ತಂದಿದೆ. ಪ್ರಸಕ್ತ ವರ್ಷದಿಂದಲೇ ಈ ಪರಿಷ್ಕರಣೆಗಳು ಜಾರಿಯಾಗಲಿವೆ ಎಂದು ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್‌ ವೈದ್ಯ ಶುಕ್ರವಾರ ಹೇಳಿದರು.

           ಸಂಘದ ವಾರ್ಷಿಕ 'ಅಖಿಲ ಭಾರತೀಯ ಪ್ರತಿನಿಧಿ ಸಭಾ' ಸಮಾವೇಶದ ವೇಳೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

             ಏಳು ದಿನಗಳ 'ಪ್ರಾಥಮಿಕ ಶಿಕ್ಷಾ ವರ್ಗ', 20 ದಿನಗಳ 'ಸಂಘ ಶಿಕ್ಷಾ ವರ್ಗ-ಪ್ರಥಮ ವರ್ಷ', 20 ದಿನಗಳ 'ಸಂಘ ಶಿಕ್ಷಾ ವರ್ಗ- ದ್ವಿತೀಯ ವರ್ಷ' ಮತ್ತು 25 ದಿನಗಳ 'ಸಂಘ ಶಿಕ್ಷಾ ವರ್ಗ-ತೃತೀಯ ವರ್ಷ'ದ ತರಬೇತಿ ಕಾರ್ಯಕ್ರಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದರು.

               ಈಗ ಸಂಘ ಹೊಸ ಕಾರ್ಯಕರ್ತರಿಗೆ 3 ದಿನಗಳ 'ಪ್ರಾರಂಭಿಕ ವರ್ಗ' ಕಾರ್ಯಕ್ರಮವನ್ನು ಹೊಂದಿದೆ. ನಂತರ ಅವರು 'ಪ್ರಾಥಮಿಕ ಶಿಕ್ಷಾ ವರ್ಗ'ದಲ್ಲಿ ಭಾಗವಹಿಸುತ್ತಾರೆ. ಬಳಿಕ 15 ದಿನಗಳ 'ಸಂಘ ಶಿಕ್ಷಾ ವರ್ಗ'ದಲ್ಲಿ ಪಾಲ್ಗೊಳ್ಳುತ್ತಾರೆ. ಇದನ್ನು ಮೊದಲು 'ಸಂಘ ಶಿಕ್ಷಾ ವರ್ಗ- ಪ್ರಥಮ ವರ್ಷ' ಎಂದು ಕರೆಲಾಗುತ್ತಿತ್ತು. ಅದು 20 ದಿನಗಳ ಅವಧಿಯದ್ದಾಗಿತ್ತು.

                ಸಂಘದ ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುತ್ತಿದ್ದಾರೆ. ಪ್ರತಿ ವರ್ಷ 15 ಸಾವಿರದಿಂದ 17 ಸಾವಿರ ಯುವಕರು 'ಪ್ರಥಮ ಶಿಕ್ಷಾ ವರ್ಗ' (ಪ್ರಥಮ ವರ್ಷ ವರ್ಗ) ಮತ್ತು ಸುಮಾರು 1 ಲಕ್ಷ ಜನರು 'ಪ್ರಾಥಮಿಕ ಶಿಕ್ಷಾ ವರ್ಗ'ದಲ್ಲಿ ಭಾಗವಹಿಸುತ್ತಾರೆ ಎಂದರು.

              ಇನ್ನು ಮುಂದೆ 'ಸಂಘ ಶಿಕ್ಷಾ ವರ್ಗ' (ಪ್ರಥಮ ವರ್ಷ) 15 ದಿನಗಳವರೆಗೆ ಇರುತ್ತದೆ. ಹಿಂದಿನ 'ದ್ವಿತೀಯ ವರ್ಷ' ಮತ್ತು 'ತೃತೀಯ ವರ್ಷ' ತರಬೇತಿಗಳನ್ನು ಕ್ರಮವಾಗಿ 'ಕಾರ್ಯಕರ್ತರ ವಿಕಾಸ್‌ ವರ್ಗ-1' ಮತ್ತು 'ಕಾರ್ಯಕರ್ತ ವಿಕಾಸ್‌ ವರ್ಗ-2' ಎಂದು ಕರೆಯಲಾಗುವುದು ಎಂದು ಅವರು ವಿವರಿಸಿದರು.

               'ತೃತೀಯ ವರ್ಷ'ದ ಪಠ್ಯ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಪರಿಷ್ಕರಣೆ ಮಾಡಲಾಗಿದೆ. ಇಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಐದು ದಿನಗಳ ಕಾಲ ಮೈದಾನಕ್ಕೆ ಕರೆದೊಯ್ದು ವರ್ತನೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ' ಎಂದರು.

1 ಲಕ್ಷ ಅರ್ಜಿಗಳು:

             ಸಂಘವನ್ನು ಸೇರಸಲು ಹೆಚ್ಚಿನ ಸಂಖ್ಯೆಯ ಜನರು ಬಯಸುತ್ತಿದ್ದು, ವಾರ್ಷಿಕ ಸರಾಸರಿ 1 ಲಕ್ಷ ಅರ್ಜಿಗಳು ಬರುತ್ತಿವೆ. ಈ ವರ್ಷದ ಮೊದಲ ಎರಡು ತಿಂಗಳಲ್ಲಿಯೇ ಸಂಘಕ್ಕೆ ಸೇರಲು 27,362 ಮನವಿಗಳು ಬಂದಿವೆ ಎಂದು ಅವರು ವಿವರಿಸಿದರು.

             ದೇಶದಾದ್ಯಂತ 73,117 ದೈನಂದಿನ ಸಂಘದ ಶಾಖೆಗಳಿವೆ. ಇವುಗಳಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ಸೇರಿದ್ದಾರೆ. ಕಳೆದ ವರ್ಷ ಶಾಖಾಗಳ ಸಂಖ್ಯೆ 4,466 ಹೆಚ್ಚಾಗಿದೆ ಎಂದು ಅವರು ಅಂಕಿ ಅಂಶದ ಮಾಹಿತಿ ನೀಡಿದರು. ಅಂತೆಯೇ ದೇಶದಲ್ಲಿ 27,717 ಸಾಪ್ತಾಹಿಕ ಶಾಖೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

               140 ಕೋಟಿ ಭಾರತೀಯರೂ ಹಿಂದೂಗಳೇ ಆಗಿದ್ದಾರೆ ಎಂದ ಅವರು, ಅನ್ಯ ಧರ್ಮಕ್ಕೆ ಹೋಗಿರುವ ಇಲ್ಲಿನವರ ಪೂರ್ವಜರು ಹಿಂದೂಗಳಾಗಿದ್ದು, ನಮ್ಮೆಲ್ಲರ ಸಂಸ್ಕೃತಿ ಒಂದೇ ಆಗಿದೆ ಎಂದು ಉತ್ತರಿಸಿದರು.

                'ಅದಾಗ್ಯೂ, ಅಲ್ಪಸಂಖ್ಯಾತರೆಂದು ಕರೆಯಲಾಗುತ್ತಿರುವವರು ಸಂಘದ ಶಾಖೆಗಳು ಮತ್ತು ಚಟುವಟಿಕೆಗಳಲ್ಲಿ ಈಗಾಗಲೇ ಸಕ್ರಿಯರಾಗಿದ್ದಾರೆ. ಅವರ ಮನದಲ್ಲಿ ಸಂಘದ ಬಗ್ಗೆಗಿನ ಭಯ ದೂರವಾಗುತ್ತಿದ್ದು, ಅವರು ಸಂಘಕ್ಕೆ ಹತ್ತಿರವಾಗುತ್ತಿದ್ದಾರೆ' ಎಂದು ಅವರು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries