ಕಾಸರಗೋಡು: ಲೋಕಸಭಾ ಚುನಾವಣೆಯ ಅಂಗವಾಗಿ ಕ್ಷೇತ್ರ ಮಟ್ಟದ ಮಾಸ್ಟರ್ ಟ್ರೈನರ್‍ಗಳಿಗೆ (ಎಎಲ್‍ಎಂಟಿ) ತರಬೇತಿಯನ್ನು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಉದ್ಘಾಟಿಸಿದರು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು.
ಚುನಾವಣೆ ಸಂದರ್ಭ ತರಬೇತಿ ಪಡೆದ 60ಮಂದಿ ವಿಧಾನಸಭಾಕ್ಷೇತ್ರ ಮಟ್ಟದ ತರಬೇತುದಾರರು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ. ಪ್ರತಿ ಕ್ಷೇತ್ರದಿಂದ ಎಆರ್‍ಓ ಗಳು ನಾಮನಿರ್ದೇಶನ ಮಾಡಿದ 12 ಕ್ಷೇತ್ರ ಮಟ್ಟದ ಮಾಸ್ಟರ್ ಟ್ರೈನರ್‍ಗಳನ್ನು ಆಯ್ಕೆ ಮಾಡಲಾಗಿದೆ. 60 ಅಸೆಂಬ್ಲಿ ಮಟ್ಟದ ಮಾಸ್ಟರ್ ಟ್ರೈನರ್‍ಗಳು, 3 ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್‍ಗಳು ಮತ್ತು 11 ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‍ಗಳು ಸೇರಿದಂತೆ 74 ಮಂದಿ ತರಬೇತಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಮತ್ತು ಸಹಾಯಕ ನೋಡಲ್ ಅಧಿಕಾರಿ ಕೆ.ಬಾಲಕೃಷ್ಣನ್, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‍ಗಳಾದ ಕೆ.ಪಿ.ಗಂಗಾಧರನ್, ಜಿ.ಸುರೇಶಬಾಬು, ಸಜೀಂದ್ರನ್, ಟಿ.ವಿ.ಸಜೀವನ್, ವಿ.ಒ.ಬಿ.ಅಜಿತ್‍ಕುಮಾರ್, ಬಿ.ಎನ್.ಸುರೇಶ್, ಧನಂಜಯನ್, ಗೋಪಾಲಕೃಷ್ಣನ್, ಪಿ.ಸಜಿತ್, ಜಿ.ನಾರಾಯಣ, ಎಲ್.ಕೆ.ಜುಬೈರ್ ಮತ್ತು ಇತರರಿದ್ದರು. ತರಗತಿ ನಡೆಸಿದರು.