ತಿರುವನಂತಪುರ: ರಾಜ್ಯದಲ್ಲಿ ಈಸ್ಟರ್, ವಿಷು ಸಬ್ಸಿಡಿ ವಸ್ತುಗಳು ಸಪ್ಲೈಕೋ ತಲುಪಲು ವಿಳಂಬವಾಗಲಿದೆ. ಪ್ರಸ್ತುತ ಸಬ್ಸಿಡಿ ಸರಕಿನ ಜೊತೆಗೆ ಈಸ್ಟರ್, ವಿಷು ಸಬ್ಸಿಡಿ ಸರಕನ್ನೂ ವಿತರಿಸಲಾಗುವುದು ಎಂದು ಆಹಾರ ಇಲಾಖೆಯ ಪ್ರಕಟಣೆ ತಿಳಿಸಿತ್ತು.
ಸಬ್ಸಿಡಿ ಅಕ್ಕಿ ಕೊರತೆಯಿಂದ ಕೆ ಅಕ್ಕಿಯನ್ನು ಸಬ್ಸಿಡಿ ವರ್ಗದಡಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಈಸ್ಟರ್ ಸಮಯದಲ್ಲಿ ಸಬ್ಸಿಡಿ ಉತ್ಪನ್ನಗಳ ಜೊತೆಗೆ ಆಹಾರ ಪದಾರ್ಥಗಳನ್ನು ಕಡಮೆ ಬೆಲೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಕೆ ಅಕ್ಕಿಯ ಮಾರುಕಟ್ಟೆ ದಿನದ ಪ್ರಮುಖ ಘೋಷÀಣೆಯಾಗಿದೆ. ಇದನ್ನು ಆಹಾರ ಇಲಾಖೆ ಸಚಿವರು ಪ್ರಕಟಿಸಿದ್ದಾರೆ. ಬೇಳೆಕಾಳು ಸೇರಿದಂತೆ ಸರಕುಗಳಿಗೆ ಸಬ್ಸಿಡಿ ನೀಡಲಾಗುವುದು. ಆದರೆ ಇದುವರೆಗೆ ಸಪ್ಲೈಕೋ ಈಸ್ಟರ್ ವಿಷು ವಸ್ತುಗಳಿಗೆ ಹಣವನ್ನೂ ಮಂಜೂರು ಮಾಡಿಲ್ಲ.
ಪ್ರಸ್ತುತ, ರಾಜ್ಯದಲ್ಲಿ ಸಪ್ಲೈಕೋಗಳು ಖಾಲಿ ಇವೆ. ಸಬ್ಸಿಡಿ ವಸ್ತುಗಳಾದ 11 ವಸ್ತುಗಳು ಲಭ್ಯವಿಲ್ಲ. ಗ್ರಾಹಕರು ನಿರಾಶೆಯಿಂದ ಮರಳಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇದೇ ವೇಳೆ, ಇತರ ಸರಕುಗಳನ್ನು ಕಡಮೆ ಬೆಲೆಗೆ ವಿತರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿಗಳು ಸಪ್ಲೈಕೋವನ್ನು ರಾಜ್ಯದ ಬ್ರಾಂಡ್ ಎಂದು ಘೋಷಿಸಿದ್ದರೂ, ಕೊರತೆ ಕೊನೆಗೊಂಡಿಲ್ಲ.