ಮನುಷ್ಯನಂತೆ ಬರೆಯಬಲ್ಲ, ಓದಬಲ್ಲ, ಸಂಭಾಷಣೆ ನಡೆಸಬಲ್ಲ ಚಾಟ್ ಜಿಪಿಟಿ ಅತ್ಯಂತ ಕಡಿಮೆ ಸಮಯದಲ್ಲಿ ಜನಮನ ಸೆಳೆದಿದೆ.
ಜಿಪಿಟಿ ಎಂದರೆ ಜನರೇಟಿವ್ ಪ್ರಿಟ್ರೇನ್ಡ್ ಟ್ರಾನ್ಸ್‍ಫಾರ್ಮರ್. ಇತ್ತೀಚಿನ ದಿನಗಳಲ್ಲಿ Chat GPT ಯೊಂದಿಗೆ ಸ್ಪರ್ಧಿಸಲು ಬೇರೆ ಯಾವುದೇ ಎ.ಐ. ಉಪಕರಣಗಳು ಹೊರಬಂದಿಲ್ಲ ಎಂಬ ಅಂಶವು ಅದರ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚಾಟ್ ಜಿಪಿಟಿಗೆ ಪೈಪೆÇೀಟಿ ನೀಡಲು ಹೊಸ ಎಐ ಟೂಲ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ ಎಂಬ ವರದಿಗಳು ಹೊರಬರುತ್ತಿವೆ.
ಬ್ಲೂಮ್‍ಬರ್ಗ್ ವರದಿ ಪ್ರಕಾರ, ಹೊಸ ಎ.ಐ. ಉಪಕರಣವನ್ನು ಹನುಮಾನ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹನುಮಾನ್ 22 ಭಾರತೀಯ ಭಾಷೆಗಳನ್ನು ಒಳಗೊಂಡಿರುವ ಇಂಡಿಕ್ ಲಾರ್ಜ್ ಲ್ಯಾಂಗ್ವೇಜ್ ಮಾದರಿ ಸರಣಿಗೆ ಸೇರಿದೆ. ಮುಂಬೈ ಐಟಿ ನೇತೃತ್ವದ ಭಾರತ್ ಜಿಪಿಟಿ ಹನುಮಾನ್ ಎಐ ಮಾದರಿಯ ಹಿಂದೆ ಇದೆ ಎಂದು ವರದಿ ತಿಳಿಸಿದೆ. ಈ ಉಪಕರಣವನ್ನು ಮಾರ್ಚ್ ಮಧ್ಯ ಭಾಗದಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಬಿಡುಗಡೆಯ ನಂತರ ಇದು ಓಪನ್ ಸೋರ್ಸ್ ಆಗಿರುತ್ತದೆ. ಇದು ಪಠ್ಯದಿಂದ ಭಾಷಣ, ಪಠ್ಯದಿಂದ ವೀಡಿಯೊ, ಪಠ್ಯದಿಂದ ಪಠ್ಯ ಮತ್ತು ಪಠ್ಯದಿಂದ ಆಡಿಯೊ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಈ ಎ.ಐ. ಉಪಕರಣದ ಸೇವೆಯನ್ನು ಜನರು 11 ಪ್ರಾದೇಶಿಕ ಭಾಷೆಗಳಲ್ಲಿ ಬಳಸಬಹುದು ಎಂದೂ ವರದಿ ಹೇಳುತ್ತದೆ.