ಬದಿಯಡ್ಕ: ಗೋಳಿಯಡ್ಕ ಶ್ರೀವಿಷ್ಣುಮೂರ್ತಿ ಬ್ರಹ್ಮಶ್ರೀ ಮೊಗೇರ, ಕೋಮರಾಯ ದೈವಸ್ಥಾನದ ಪ್ರತಿಷ್ಠಾದಿನ, ಒತ್ತೆಕೋಲ, ಮೊಗೇರ, ಕೋಮರಾಯ ನೇಮೋತ್ಸವ ಮಾ. 23ಹಾಗೂ 24ರಂದು ಜರುಗಲಿದೆ.
23ರಂದು ಬೆಳಗ್ಗೆ 6.30ಕ್ಕೆ ಗಣಪತಿ ಹೋಮ, 7ಕ್ಕೆ ಮೇಲೇರಿ ಸೇರಿಸುವುದು, ಸಾಮೂಹಿಕ ಪ್ರಾರ್ಥನೆ, ಭಜನೆ, ಮಧ್ಯಾಹ್ನ12ಕ್ಕೆ ಗುಳಿಗ ದೈವದ ಕೋಲ, 3ಕ್ಕೆ ಬೆಮ್ಮರಿಗೆ ಹಾಲು, ಸೀಯಾಳ ಅಭಿಷೇಕ, ಸಂಜೆ 6ಕ್ಕೆ ದೈವಗಳ ಭಂಡಾರ ಇಳಿಸುವುದು, ರಾತ್ರಿ 9.30ಕ್ಕೆ ಆದಿ ಶ್ರೀನಾಗಬ್ರಹ್ಮ ಮೊಗೇರ ದೈವಗಳನೇಮ, 10.30ಕ್ಕೆ ಅಕ್ಕ ಕುಞಂತ್ರಿ ಮೂವೇರ್ ಭೂತ, 12ಕ್ಕೆ ಗೋಳಿಯಡ್ಕ ಎಡನಾಡು ತರವಾಡುಮನೆಯಿಂದ ಬ್ರಹ್ಮಶ್ರೀ ಮೊಗೇರ ದೈವ ಸನ್ನಿಧಿಗೆ ತನ್ನಿಮಾನಿಗ ದೈವದ ಆಗಮನವಾಗುವುದು.
24ರಂದು ಬೆಳಗ್ಗೆ 4.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ, ಬೆಳಗ್ಗೆ 8.30ಕ್ಕೆ ಶ್ರೀ ಬಬ್ಬರ್ಯ ದೈವದ ನೇಮ, 9.30ಕ್ಕೆ ಶ್ರೀ ಕೋಮರಾಯ ಚಾಮುಂಡಿ ದ್ಯವದ ನೇಮ ನಡೆಯುವುದು.