ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಕಲಿಕೆ ಪೂರಕವಾಗಿ ಬಯಲು ಪ್ರವಾಸವನ್ನು ಕೈಗೊಳ್ಳಲಾಯಿತು. ನಮ್ಮಮನೆ ಎಂಬ ವಿಷಯಾಧಾರಿತವಾಗಿ ಒಂದು ದಿನದ ಚಟುವಟಿಕಾ ಶಿಬಿರ ದೇಶೀಯ ತಳಿಯ ಗೋವನ್ನೇ ಸಾಕಿ ಸಲಹಿ, ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳೆಯ ಅವರ ಪಳ್ಳತ್ತಡ್ಕ ಕಾಡಮನೆ ಸಮೀಪದ ಜಗದಂಬಾ ಫಾಮ್ರ್ಸ್‍ನಲ್ಲಿ ನಡೆಯಿತು.a ಪುಟ್ಟ ಗಾತ್ರದ ದನಕರುಗಳಿಗೆ ಗೋಗ್ರಾಸವನ್ನು ನೀಡಿದ ವಿದ್ಯಾರ್ಥಿಗಳು ಖಷಿಪಟ್ಟರು. ಕಾಡನ್ನು ಸುತ್ತಿದ ವಿದ್ಯಾರ್ಥಿಗಳು ನಂತರ ಸಮೀಪದಲ್ಲಿ ಹೊಳೆಗೆ ಕಟ್ಟಿದ ಕಟ್ಟವನ್ನು ವೀಕ್ಷಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಅಧ್ಯಾಪಕ ವೃಂದದ ಜಯಶ್ರೀ, ವಿನಯಪಾಲ್, ಸುಶ್ಮಾ, ಸಹಾಯಕರಾಗಿ ಸಮತಿ ಪಾಲ್ಗೊಂಡಿದ್ದರು.