ತಿರುವನಂತಪುರಂ: ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ, ಕೇರಳದ ಆಟ್ಟಿಂಗಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಮುರಳೀಧರನ್ ಅವರಿಗೆ ಸ್ವಂತ ಮನೆಯಿಲ್ಲ. ಇವರ ಕೈವಶ ಕೇವಲ ಒಂದು ಸಾವಿರ ರೂ. ನಗದು ಇದ್ದು, ವೇತನ ಲಭಿಸಿದ ಮೊತ್ತವನ್ನು ಎಫ್‍ಡಿಯಾಗಿ ನಿಕ್ಷೇಪಿಸಿದ್ದು, ಒಟ್ಟು 1044274ರೂ. ಮಾತ್ರ ಹೊಂದಿದ್ದಾರೆ. ಇದು ಸಚಿವ ವಿ. ಮುರಳೀಧರನ್ ತಿರುವನಂತಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿದ ನಾಮಪತ್ರದೊಂದಿಗೆ ಒದಗಿಸಿದ ಸೊತ್ತು ಲೆಕ್ಕಾಚಾರವಾಗಿದೆ.
12ಲಕ್ಷ ರೂ. ಮೊತ್ತದ ಸ್ವಂತ ಕಾರು, ಕೈಯಲ್ಲಿರುವ ಉಂಗುರದ ಮೊತ್ತ 40452 ರೂ ಅಲ್ಲದೆ 118865ರೂ. ಮೊತ್ತದ ಆರೋಗ್ಯ ವಿಮೆ ಹೊಂದಿದ್ದಾರೆ. ಇನ್ನು ಕೇಂದ್ರ ಸಚಿವರಿಗೆ 83437ರು. ಸಾಲ ಹೊಂದಿದ್ದಾರೆ. ಇವೆಲ್ಲವನ್ನೂ ಸಏರಿಸಿ 24,04,591ರೂ. ಮೊತ್ತದ ಸೊತ್ತು ಹೊಂದಿದ್ದಾರೆ. ಇನ್ನು ಇವರ ಪತ್ನಿ ಕೈವಶ 3ಸಾವಿರ ರೂ. ಇದ್ದು, ಬ್ಯಾಂಕ್ ಖಾತೆಯಲ್ಲಿ 20,27,136ರೂ. ಇದೆ. ಒಟ್ಟು 4,47,467ರೂ. ಮೊತ್ತದ ಸ್ಥಿರ ಆಸ್ತಿ ಹೊಂದಿದ್ದಾರೆ.
ಅಟ್ಟಿಂಗಲ್ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿಯಾಗಿ ವಿ. ಮುರಳೀಧರನ್ ನಾಮಪತ್ರ ಸಲ್ಲಿಸಿದರು. ಕುಡಪ್ಪನಕುನ್ನು ಕಲೆಕ್ಟರೇಟ್ ತಲುಪಿ ನಾಮಪತ್ರ ಸಲ್ಲಿಸಿದರು.
ನಿನ್ನೆ ಬೆಳಗ್ಗೆ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನ, ಪಜವಂಗಡಿ ಗಣಪತಿ ದೇವಸ್ಥಾನ ಹಾಗೂ ಶ್ರೀ ಧರ್ಮಶಾಸ್ತಾ ದೇವಸ್ಥಾನಕ್ಕೆ ಭೇಟಿ ನೀಡಿ ಕಲೆಕ್ಟರೇಟ್ ತಲುಪಿದ ವಿ. ಮುರಳೀಧರನ್ ಅವರನ್ನು ಕಾರ್ಯಕರ್ತರು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಿದರು. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಉಕ್ರೇನ್‍ನ ಯುದ್ಧ ರಂಗದಿಂದ ವಾಪಸಾದ ವೈದ್ಯಕೀಯ ವಿದ್ಯಾರ್ಥಿಗಳು ಕೇಂದ್ರ ಸಚಿವ ವಿ. ಮುರಳೀಧರನ್ ಅವರಿಗೆ ಬಾಂಡ್ ಮೊತ್ತ ನೀಡಿದರು. ವಿ.ಮುರಳೀಧರನ್ ಅವರು ಈ ಹಣವನ್ನು ತಮ್ಮ ಸಾರ್ವಜನಿಕ ವೃತ್ತಿಜೀವನಕ್ಕೆ ಪಡೆದ ದೊಡ್ಡ ಮನ್ನಣೆಯಾಗಿ ಕಾಣುವುದಾಗಿ ಹೇಳಿದ್ದರು. ಈ ಮೊತ್ತವನ್ನು ವಿದ್ಯಾರ್ಥಿಗಳ ಕೊಡುಗೆಯಾಗಿ ಕಾಣುತ್ತೇನೆ ಮತ್ತು ಜನರ ಸೇವೆಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಮೊನ್ನೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಾಯಿ ಶ್ರುತಿ, ಸೌರವ್ ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಮುರಳೀಧರನ್ ಅವರಿಗೆ ಹಣ ಹಸ್ತಾಂತರಿಸಲಾಯಿತು. ರಣರಂಗದಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳಿಗೆ ಇದು ಎರಡನೇ ಜನ್ಮವಾಗಿದ್ದು, ತಮ್ಮ ವಾಪಸಾತಿಯನ್ನು ಸಾಧ್ಯವಾಗಿಸಿದ ಪ್ರಧಾನಿ ಹಾಗೂ ಕೇಂದ್ರ ಸಚಿವ ವಿ.ಮುರಳೀಧರನ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೇಂದ್ರ ಸಚಿವರಿಗೆ ಉಚಿತವಾಗಿ ವಿದ್ಯಾರ್ಥಿಗಳು ಚುನಾವಣೆಗೆ ಮುನ್ನ ಕಟ್ಟಬೇಕಾದ ಮೊತ್ತವನ್ನು ಹಸ್ತಾಂತರಿಸಿದರು.