ಇಡುಕ್ಕಿ: ಮೂನ್ನಾರ್‍ಗೆ ಬರುವ ಪ್ರವಾಸಿಗರು ಕಾಡಾನೆಗಳನ್ನು ಕೆರಳಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮೊನ್ನೆ ಮೂನ್ನಾರ್ ನ ಸೆವೆನ್ ಮಾಲಾ ಎಸ್ಟೇಟ್ ಬಳಿ ಯುವಕನೊಬ್ಬ ಕಾಡಾನೆಯ ಸಮೀಪ ನಿಂತು ಪೋಟೋ ತೆಗೆಯಲು ಯತ್ನಿಸಿದ ಚಿತ್ರಗಳು ಹೊರ ಬಂದಿದ್ದವು. ಚಹಾ ತೋಟದಲ್ಲಿ ಬೀಡುಬಿಟ್ಟಿದ್ದ ಒಂಟಿಸಲಗನ ಬಳಿ ನಿಂತು ಯುವಕನ ಪೋಟೋ ಶೂಟ್ ಮಾಡಲಾಗಿತ್ತು.
ಕಾಡಾನೆ ದಾಳಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೂ ಇಂತಹ ಪ್ರಚೋದನೆಗಳು ನಡೆಯುತ್ತಿವೆ. ಇಂತಹ ಸಂದರ್ಭಗಳನ್ನು ತಡೆಯಬೇಕೆಂಬ ಬೇಡಿಕೆಯೂ ಇದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು. ಸ್ಥಳೀಯ ನಿವಾಸಿಗಳ ಪ್ರಕಾರ, ಪ್ರವಾಸಿಗರು ಆನೆಗಳನ್ನು ಹಿಂಬಾಲಿಸುವುದು, ಕ್ಲೋಸ್-ಅಪ್ ಪೋಟೋಗಳನ್ನು ತೆಗೆಯುವುದು ಮತ್ತು ಅವುಗಳ ದಂತಗಳನ್ನು ಹಿಡಿಯಲೆತ್ನಿಸಿ ಓಡುವುದು ಮುಂತಾದ ಪ್ರಚೋದನೆಗಳು ಸಾಕಷ್ಟು ಇವೆ. ಅಂತಹ ಕುಚೋದ್ಯಗೊಳಿಸುವ ಜನರು ಕೋಪಗೊಂಡ ಆನೆಗಳ ದಾಳಿಯಿಂದ ಪಾರಾಗಬಹುದಾದರೂ, ನಂತರ ಬರುವವರು ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.