ಪೆರ್ಲ: ನಿವೃತ್ತ ಶಿಕ್ಷಕ, ದಿ. ಪುಂಡಿಕೈ ಈಶ್ವರ ಭಟ್ ಜನ್ಮಶತಮಾನೋತ್ಸವ, ಸಂಸ್ಮರಣಾ ಗ್ರಂಥ'ಶ್ರೀಗಂಧ'ದ ಲೋಕಾರ್ಪಣಾ ಸಮಾರಂಭ ಮಾ. 29ರಂದು ಬೆಳಗ್ಗೆ 10ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಕಲಾನಿಲಯ ಸಭಾಂಗಣದಲ್ಲಿ ಜರುಗಲಿದೆ.
ಬೆಳಗ್ಗೆ 8ಕ್ಕೆ ಗಣಪತಿ ಹೋಮ, 9ಕ್ಕೆ ಕಲಾನಿಲಯ ಸನಿಹ ದಿ. ಈಶ್ವರ ಭಟ್ ಪುಂಡಿಕೈ ಸ್ಮರಣಾರ್ಥ, ನಾರಯಣ ಭಟ್ ಪುಂಡಿಕೈ ಕೊಡುಗೆಯಾಗಿ ನೀಡಿದ ಕ್ರೀಡಾ ವಿಶ್ರಾಂತಿ ಕೊಠಡಿಗಳ ಉದ್ಘಾಟನೆ ನಡೆಯುವುದು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಉದ್ಘಾಟಿಸುವರು. ಈ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಳ್ಳಂಬೆಟ್ಟು ಸುಧಾಕರ ಪೈ ಬೆಂಗಳೂರು ಅಧ್ಯಕ್ಷತೆ ವಹಿಸುವರು. 'ಶ್ರೀಗಂಧ' ಸಂಸ್ಮರಣಾ ಗ್ರಂಥವನ್ನು ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಬಿ ಲೋಕಾರ್ಪಣೆಗೈಯುವರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಮುಖ್ಯ ಅತಿಥಿ ಹಾಗೂ ಖ್ಯಾತ ಸಾಹಿತಿ ಪ್ರೊ. ವಿ.ಬಿ ಅರ್ತಿಕಜೆ ಗೌರ ಅತಿಥಿಯಾಗಿ ಭಾಗವಹಿಸುವರು. ಪೆರ್ಲ ಶ್ರಿ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ,ಜಿ ರಾಮ ಭಟ್, ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ, ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ವೆಂಕಟ್ರಾಜ ವಿಶ್ವಾಮಿತ್ರ, ಸದಾಶಿವ ಭಟ್ ಹರಿನಿಲಯ, ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅದ್ಯಕ್ಷ ಟಿ. ಪ್ರಸಾದ್ ಪೆರ್ಲ, ಉದ್ಯಮಿ ಅಶೋಕ್ ಪೈ, ಹಿರಿಯ ಶಿಕ್ಷಕ ಕೇಶವ ಪ್ರಕಾಶ್ ಎನ್ ಉಪಸ್ಥಿತರಿರುವರು. ಈ ಸಂದರ್ಭ ಸಂಸ್ಮರಣಾ ಗ್ರಂಥದ ಲೇಖಕರಿಗೆ ಗೌರವಾರ್ಪಣೆ ನಡೆಯುವುದು.