ತಿರುವನಂತಪುರಂ: ರಷ್ಯಾದಲ್ಲಿ ನಡೆದ ಉಗ್ರರ ದಾಳಿಯು ಕೇರಳಕ್ಕೂ ಒಂದು ಎಚ್ಚರಿಕೆ ಎಂದು ಮಾಜಿ ಡಿಜಿಪಿ ಟಿ.ಪಿ.ಸೆನ್‍ಕುಮಾರ್ ಹೇಳಿದ್ದಾರೆ.
ಎನ್ಐಎ ವರದಿಯನುಸಾರ ನೋಡಿದರೆ ನಂಬರ್ ಒನ್ ರಾಜ್ಯದಲ್ಲಿ ಐಎಸ್ ಅತಿ ಹೆಚ್ಚು ಸಕ್ರಿಯ. ಸಿಪಿಎಂ ಕಾಂಗ್ರೆಸ್ ನೀಡಿದ ಕುರುಡು ಬೆಂಬಲದಿಂದಾಗಿ ಅದು ಬೆಳೆದಿದೆ. ಇದು ಶೇ.27ರಷ್ಟಿದ್ದರೆ ಭವಿಷ್ಯವೇನು?’ ಎಂದು ಸೇನ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಐಎಸ್ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಈ ಟಿಪ್ಪಣಿ ಬರೆದಿದ್ದಾರೆ. ಉಗ್ರರ ದಾಳಿಯಲ್ಲಿ 115 ಮಂದಿ ಸಾವನ್ನಪ್ಪಿದ್ದರು. ರಾಜಧಾನಿ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ನಲ್ಲಿ ಶುಕ್ರವಾರ ರಾತ್ರಿ ಉಗ್ರರ ದಾಳಿ ನಡೆದಿದ್ದು, ರಷ್ಯಾವನ್ನು ಬೆಚ್ಚಿ ಬೀಳಿಸಿದೆ. ಸಂಗೀತ ಕಾರ್ಯಕ್ರಮದ ವೇಳೆ ಮುಖವಾಡ ಧರಿಸಿದ್ದ ದುಷ್ಕರ್ಮಿಗಳು ಪ್ರೇಕ್ಷಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಂಡದಲ್ಲಿ ಐದು ಜನರಿದ್ದರು. ಗುಂಡಿನ ದಾಳಿಯ ನಂತರ ಕಟ್ಟಡದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದವು. ಕಟ್ಟಡದಿಂದ ಬೆಂಕಿ ಏಳುತ್ತಿರುವ ದೃಶ್ಯಗಳೂ ಹೊರಬಿದ್ದಿವೆ.ದಾಳಿಕೋರರು ಸೈನಿಕರ ಬಟ್ಟೆಯನ್ನೇ ಧರಿಸಿ ಬಂದಿದ್ದರು. ಸುಮಾರು ಒಂಬತ್ತು ಸಾವಿರ ಜನರಿಗೆ ಅವಕಾಶ ಕಲ್ಪಿಸುವ ಕಟ್ಟಡದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗುಂಡಿನ ದಾಳಿ ನಡೆದಾಗ ಸುಮಾರು ಆರು ಸಾವಿರ ಮಂದಿ ಸ್ಥಳದಲ್ಲಿ ಹಾಜರಿದ್ದರು.
ಇದು ಒಂದು ದಶಕದಲ್ಲಿ ಮಾಸ್ಕೋದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಭಯೋತ್ಪಾದಕ ಸಂಘಟನೆ ಐಎಸ್ ದಾಳಿಯ ಹೊಣೆ ಹೊತ್ತುಕೊಂಡಿದೆ.