HEALTH TIPS

ಅಮೆರಿಕಕ್ಕೆ ಭಾರತದ ವೃತ್ತಿಪರರು ಬೇಕು: ಅಮೆರಿಕ ಕಾಂಗ್ರೆಸ್ ಸದಸ್ಯ

              ವಾಷಿಂಗ್ಟನ್: ಅಮೆರಿಕಕ್ಕೆ ಭಾರತದ ಅರ್ಹ ವೃತ್ತಿಪರರ ಅಗತ್ಯವಿದೆ ಎಂದು ಅಮೆರಿಕದ ಪ್ರಭಾವಿ ಸಂಸದರೊಬ್ಬರು ಹೇಳಿದ್ದಾರೆ.

             ಪ್ರತಿ ದೇಶಕ್ಕೆ ವರ್ಷಕ್ಕೆ ಗ್ರೀನ್ ಕಾರ್ಡ್ ವಿತರಣೆ ಮಾಡಲು ಇರುವ ಶೇ 7ರ ಮಿತಿಯನ್ನು ತೆಗೆದುಹಾಕಬೇಕು. ಇದು ಭಾರತದಿಂದ ವಲಸೆ ಬಂದ ವೃತ್ತಿಪರರಿಗೆ ದಶಕಗಳ ದೀರ್ಘ ಕಾಯುವಿಕೆಗೆ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ..

                  'ಭಾರತೀಯರು ಉದ್ಯೋಗಕ್ಕಾಗಿ ಅಮೆರಿಕಕ್ಕೆ ವಲಸೆ ಬರುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ, ಅಮೆರಿಕವು ಇಲ್ಲಿ ಕೆಲಸ ಮಾಡಲು ಅರ್ಹ, ಉನ್ನತ ಕೌಶಲ್ಯ ಹೊಂದಿರುವ ಜಗತ್ತಿನ ವಿವಿಧೆಡೆಯಿಂದ ಬರುವ ಬುದ್ಧಿವಂತ ಜನರನ್ನು ಅವಲಂಬಿಸಿದೆ. ಇದು ಅಮೆರಿಕಕ್ಕೆ ಸಹಜ ಪ್ರಯೋಜನಗಳಲ್ಲಿ ಒಂದಾಗಿದೆ'ಎಂದು ಪೆನ್ಸಿಲ್ವೇನಿಯಾದ 8ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸುವ ಕಾಂಗ್ರೆಸ್‌ ಸದಸ್ಯ ಮ್ಯಾಟ್ ಕಾರ್ಟ್‌ರೈಟ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಮೆರಿಕವು ಪ್ರತಿ ವರ್ಷ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರತಿ ದೇಶಕ್ಕೆ ಶೇ 7ರಷ್ಟು ಕೋಟಾ ಹೊಂದಿದೆ. ಇದನ್ನು ತೆಗೆದುಹಾಕಲು ಫೌಂಡೇಶನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಡಯಾಸ್ಪೊರಾ (ಎಫ್‌ಐಐಡಿಎಸ್) ಸೇರಿದಂತೆ ಭಾರತೀಯ ಅಮೆರಿಕನ್ ಸಂಸ್ಥೆಗಳ ಮನವಿಯನ್ನು ಕಾರ್ಟ್‌ರೈಟ್ ಬೆಂಬಲಿಸಿದ್ದಾರೆ.

               'ಈಗಿರುವ ಸಮಸ್ಯೆಯೆಂದರೆ, ನಾವು ಪ್ರತೀ ವರ್ಷ ಗ್ರೀನ್ ಕಾರ್ಡ್ ವಿತರಣೆಯಲ್ಲಿ ಪ್ರತಿ ದೇಶಕ್ಕೆ ಶೇ 7ರಷ್ಟು ಮಿತಿ ವಿಧಿಸಿದ್ದೇವೆ. ಇದು ಭಾರತದಂತಹ ದೊಡ್ಡ ರಾಷ್ಟ್ರಗಳಿಗೆ ಅನಾನುಕೂಲವಾಗಿದೆ' ಎಂದೂ ಅವರು ಹೇಳಿದ್ದಾರೆ.

                ದೊಡ್ಡ ದೇಶ ಮಾತ್ರವಲ್ಲ, ಅತ್ಯಂತ ಕೌಶಲ್ಯ ಹೊಂದಿರುವ, ಒಳ್ಳೆಯ ವಿದ್ಯಾಭ್ಯಾಸ ಪಡೆದಿರುವ ಭಾರತದ ವಲಸಿಗರಿಗೆ ಇದು ಮಾರಕವಾಗಿದೆ. ನಮ್ಮ ದೇಶಕ್ಕೆ ಬರುವ ಮತ್ತು ನಮ್ಮ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಅಮೆರಿಕ ಮೂರ್ಖತನಕ್ಕೆ ಸಾಕ್ಷಿಯಾಗುತ್ತದೆ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries