ಮಂಜೇಶ್ವರ: ಮೀಯಪದವು ಮದಕ್ಕಳ ನಿವಾಸಿ ಮೊಯ್ದೀನ್ ಆರಿಫ್(22)ಕೊಲೆ ಪ್ರಕರಣದ ಆರೋಪಿಗಳಾದ ಅಬ್ದುಲ್ ರಶೀದ್, ಸೌಕತ್ತಲಿ, ಅಬೂಬಕ್ಕರ್ ಸಿದ್ದೀಕ್ ಎಂಬವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ. ನ್ಯಾಯಾಲಯ ನಿರ್ದೇಶ ಪ್ರಕಾರ ಇವರನ್ನು ಮಂಜೇಶ್ವರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಮೂರು ದಿವಸಗಳ ಕಾಲ ಇವರುಪೊಲೀಸರ ವಶದಲ್ಲಿರಲಿದ್ದು, ಮಾ. 19ರಂದು ಮತ್ತೆ ನ್ಯಾಯಾಂಗಬಂಧನಕ್ಕೆ ಒಪ್ಪಿಸಬೇಕಾಗಿದೆ.
ಕೊಲೆಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಆರೋಪಿಗಳನ್ನು ವಿವಿಧ ಪ್ರದೇಶಗಳಿಗೆ ಕರೆದೊಯ್ದು ಪೊಲಿಸರು ಮಾಹಿತಿ ಸಂಗ್ರಹಿಸಿದರು. ಪ್ರಕರನದಲ್ಲಿ ಒಂಬತ್ತು ಮಂದಿ ಆರೋಪಿಗಳಿದ್ದು, ಇತರ ಆರುಮಂದಿ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಇವರಲ್ಲಿ ಇಬ್ಬರು ಆರೋಪಿಗಳು ವಿದೆಶಕ್ಕೆ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.