ಕೊಟ್ಟಾಯಂ: 2 ಕೋಟಿ ರೂ.ಗಳ ವಿದ್ಯುತ್ ಬಾಕಿಯಿಂದಾಗಿ ಕೆಎಸ್‍ಇಬಿ ನಟಕಂನಲ್ಲಿರುವ ತಿರುವಾಂಕೂರು ಸಿಮೆಂಟ್ ಕಾರ್ಖಾನೆಯ ಪ್ಯೂಸ್ ಕಿತ್ತಿದ್ದಾರೆ.
ಇದರಿಂದ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತು. ಸದ್ಯ ದುಡಿಯುವ ಬಂಡವಾಳವಿಲ್ಲದೆ ಸಂಕಷ್ಟದಲ್ಲಿರುವ ಕಂಪನಿಗೆ ಕೆಎಸ್ ಇಬಿ ಯ ಈ ಕ್ರಮ ಕರಿನೆರಳು ಬಿದ್ದಿದೆ.
2017ರಿಂದ ಈ ಬಾರಿಯ ಬಜೆಟ್ ವರೆಗೆ ವಿವಿಧ ಆಧುನೀಕರಣಕ್ಕೆ ಸರ್ಕಾರ ಹಣ ಮೀಸಲಿಟ್ಟಿದ್ದರೂ ಕಂಪನಿಗೆ ಏನೂ ಪ್ರಯೋಜನವಾಗಿಲ್ಲ. ಕಾರಣ, ಪ್ರತಿ ಯೋಜನೆಗೆ ನಿಗದಿಪಡಿಸಿದ ಮೊತ್ತವನ್ನು ಬೇರೆಡೆ ಬಳಸುವಂತಿಲ್ಲ. ಕಂಪನಿಗೆ ತುರ್ತಾಗಿ ದಿನನಿತ್ಯದ ಖರ್ಚು ಮತ್ತು ಸಂಬಳಕ್ಕೆ ಹಣದ ಅಗತ್ಯವಿದೆಯೇ ಹೊರತು ಆಧುನೀಕರಣಕ್ಕಲ್ಲ.
ಆಧುನೀಕರಣಕ್ಕೆ ಹಣ ಮಂಜೂರು ಮಾಡಿದರೂ ಪ್ರಸ್ತುತ ಗರಿಷ್ಠ ಸಾಮಥ್ರ್ಯದಲ್ಲಿ ಉತ್ಪಾದನೆ ನಡೆಯುತ್ತಿಲ್ಲ. ತಿಂಗಳಿಗೆ ಸರಾಸರಿ 600-800 ಟನ್ ಬಿಳಿ ಸಿಮೆಂಟ್ ಉತ್ಪಾದನೆಯಾಗುತ್ತದೆ. ಕನಿಷ್ಠ 1500 ಟನ್ ಉತ್ಪಾದಿಸಿದರಷ್ಟೇ ಲಾಭವಾಗಬಲ್ಲದು.
ಪ್ರಸ್ತುತ ಬಿಕ್ಕಟ್ಟನ್ನು ನೀಗಿಸಲು ಕೆ.ಎಸ್.ಇ. ಬಿ ಗೆ ಬಾಕಿ ಪಾವತಿಸುವ ಸಾಮಥ್ರ್ಯ ಸಿಮೆಂಟ್ಸ್ ಕಂಪೆನಿ ಹೊಂದಿಲ್ಲ. ಸಚಿವರ ಮಟ್ಟದಲ್ಲಿ ಮಧ್ಯಪ್ರವೇಶವಾದರೆ ಮಾತ್ರ ಉತ್ಪಾದನೆ ಮುಂದುವರಿಯಲು ಸಾಧ್ಯ.