HEALTH TIPS

ವಿವಾದ ಸೃಷ್ಟಿಸಿದ ಬಿಜೆಪಿ ಸಂಸದ ಘೋಷ್ ಹೇಳಿಕೆ

             ಕೋಲ್ಕತ್ತ: ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ದಿಲೀಪ್‌ ಘೋಷ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊ ತುಣುಕು ವಿವಾದಕ್ಕೆ ಕಾರಣವಾಗಿದೆ.

             'ಬಂಗಾಳವು ತನ್ನ ಮಗಳನ್ನು ಬಯಸುತ್ತದೆ' ಎಂಬ ಟಿಎಂಸಿ ಘೋಷವಾಕ್ಯವನ್ನು ಘೋಷ್‌ ಅಣಕಿಸಿದ್ದರು.

            'ಮಮತಾ ಬ್ಯಾನರ್ಜಿ ಗೋವಾಗೆ ಹೋದಾಗ, ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾದಲ್ಲಿ 'ತ್ರಿಪುರಾದ ಮಗಳು' ಎನ್ನುತ್ತಾರೆ. ಮೊದಲು...ಸ್ಪಷ್ಟಪಡಿಸಲಿ' ಎಂದು ಹೇಳಿದ್ದರು.

            ಇದಕ್ಕೆ ಟಿಎಂಸಿ ತೀಕ್ಷ್ಣ ತಿರುಗೇಟು ನೀಡಿದ್ದು, 'ಬಿಜೆಪಿ ಸಂಸದ ಘೋಷ್‌ ಹೇಳಿಕೆಯು ಅವರ ದೇಹದಲ್ಲಿ 'ಕೇಸರಿ ಪಾಳಯದ ಡಿಎನ್‌ಎ' ಇದೆ ಎನ್ನುವುದನ್ನು ತೋರಿಸುತ್ತದೆ' ಎಂದು ಹೇಳಿದೆ.

                'ದಿಲೀಪ್ ಘೋಷ್‌ ರಾಜಕೀಯ ನಾಯಕತ್ವಕ್ಕೆ ಕಪ್ಪುಚುಕ್ಕಿ. ತಾಯಿ ದುರ್ಗೆಯ ವಂಶಪರಂಪರೆಗೆ ಸವಾಲು ಹಾಕುವುದರಿಂದ ಹಿಡಿದು, ಮಮತಾ ಬ್ಯಾನರ್ಜಿ ಅವರ ಪೂರ್ವಜರನ್ನು ಪ್ರಶ್ನಿಸುವವರೆಗೆ ಅವರು ನೈತಿಕ ದಿವಾಳಿತನದ ಅತ್ಯಂತ ಕೊಳಕು ಆಳದಲ್ಲಿ ಮುಳುಗಿದ್ದಾರೆ' ಎಂದು ಟಿಎಂಸಿ 'ಎಕ್ಸ್‌'ನಲ್ಲಿ ಆಕ್ರೋಶ ಹೊರಹಾಕಿದೆ.

               ಘೋಷ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಹ ನೀಡಿದೆ.

             'ಹಿಂದೂ ಧರ್ಮದ ದೇವತೆಗಳಾಗಿರಲಿ ಅಥವಾ ರಾಜ್ಯದ ಮುಖ್ಯಮಂತ್ರಿಯಾಗಿರಲಿ; ಬಂಗಾಳದ ಮಹಿಳೆಯರ ಬಗ್ಗೆ ಘೋಷ್‌ ಅವರಿಗೆ ಎಳ್ಳಷ್ಟೂ ಗೌರವವಿಲ್ಲ ಎಂಬುದು ಸ್ಪಷ್ಟ' ಎಂದು ಹೇಳಿದೆ. ಘೋಷ್‌ ಅವರು ಕ್ಷಮೆಯಾಚಿಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಂಜಾ ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries