ತಿರುವನಂತಪುರಂ: ಇಂದಿನ ಸಾಮಾಜಿಕ ವ್ಯವಸ್ಥೆ, ವಿದ್ಯಮಾನಗಳು ಘಳಿಗೆ-ಘಳಿಗೆಗಳಿಗೂ ಸ್ಥಿತ್ಯಂತರಗೊಳ್ಳುವ ಕುತೂಹಲದ, ಅಚ್ಚರಿಯ ಮಟ್ಟದಲ್ಲಿ ನಮ್ಮಿದಿರು ನರ್ತಿಸುತ್ತದೆ. ಸಾಮಾನ್ಯವಾಗಿ ರಾಜಕೀಯ ಮನಸ್ಸುಗಳು ಹೆಚ್ಚು-ಹೆಚ್ಚು ವಿವ್ವಲತೆಯಿಂದ ನಲುಗುತ್ತಿರುವುದು, ವ್ರಣವಾಗಿ ರಕ್ತಸೋರುತ್ತಿರುವುದು ಕಳವಳಕಾರಿಯೂ ಹೌದು. ಪ್ರಸ್ತುತ ಕೇರಳದ ದಿನದಿನದ ವಿದ್ಯಮಾನ ಇದೇ ಜಾಡಿನದು. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ರಾರಾಜಿಸುತ್ತಿರುವ ಕಲಾಮಂಡಲಂ ಸತ್ಯಭಾಮೆ ವಿಷಯ ಸಂತಸದಿಂದ ಕೇಕೆಗುಟ್ಟುತ್ತಿದೆ. ಏಕೆಂದರೆ ವಯನಾಡಿನ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ ಅವರನ್ನು ಎಸ್‍ಎಫ್‍ಐಗಳು ಬರ್ಬರವಾಗಿ ಹತ್ಯೆಗೈದಾಗ ಅಡಗಿದ್ದ ಸಾಂಸ್ಕøತಿಕ ವೀರರನ್ನು ಹೊರತರಲು ಕಲಾಮಂಡಲಂ ಸತ್ಯಭಾಮೆಯನ್ನು ಬಳಸಿಕೊಂಡಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಸಿದ್ಧಾರ್ಥನ ತಾಯಿ ಶೀಬಾ, ತಂದೆ ಜಯಪ್ರಕಾಶ ಸಾಮಾನ್ಯ ಜನರಾದರೂ ಪ್ರತಿಕ್ರಿಯಿಸಲಾರದೆ ಆಂತರ್ಯದೊಳಗೇ ಕಸಿವಿಸಿಯಿಂದ ಬಳಲುತ್ತಿರುವ ದಿನಗಳು. ಏಕೆಂದರೆ ಎಸ್ಎಫ್ಐ ಇಲ್ಲಿನ ಆಡಳಿತ ವರ್ಗದ ಪ್ರತಿನಿಧಿಗಳು. ಹಾಗಾಗಿ ಅವರ ವಿರುದ್ಧದ ಪ್ರತಿಕ್ರಿಯೆಗೆ ಹೊರಗಿನಿಂದ ಬೆಂಬಲ ಬೇಕು ಎಂದಾಗ ಇವರೆಲ್ಲ ಕತ್ತಲಲ್ಲಿ ಅವಿತಿದ್ದಾರೆ. ಈ ತಂದೆ ಮತ್ತು ತಾಯಂದಿರು ಆಡಳಿತದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆಗಳಿಗಾಗಿ ಕಾಯುವ ಕ್ಷಣಗಳು ಅವು. ತಮ್ಮ ಸೋದರನೊಬ್ಬನನ್ನು ಬೆತ್ತಲೆಯಾಗಿ ಬೆಲ್ಟ್ ಬಕಲ್ ಮತ್ತು ವಿದ್ಯುತ್ ತಂತಿಗಳಿಂದ ಪ್ರಜ್ಞಾಹೀನಗೊಳಿಸಿದ ಸಂಘಟನೆಯ ತೀರ್ಪಿನ ವಿರುದ್ಧ ಇಡೀ ಎಡಪಕ್ಷಗಳು ಮೌನವಾಗಿರುವುದು ಇತಿಹಾಸದಲ್ಲಿ ಒಂದು ಕಪ್ಪು ಕ್ಷಣ. ಎಡಪಂಥೀಯರ ಯಾವ ಸಾಂಸ್ಕೃತಿಕ ವೀರರೂ ಅಂದು ನಾಲಿಗೆ ಎತ್ತಲಿಲ್ಲ.
ಈಗ ಕಲಾಮಂಡಲಂ ಸತ್ಯಭಾಮಾ ಅವರು ಮೋಹಿನಿಯಾಟ್ಟಂನ ಮತ್ತೊಮ್ಮ ಕಲಾವಿದನನ್ನು ಕರಿಯ ಬಣ್ಣದವನಿಗೆ ಈ ನೃತ್ಯ ಒಪ್ಪುವುದಿಲ್ಲ ಎಂದು ಜಾತಿ ನಿಂದನೆ ಮಾಡಿದಾಗ ಒಂದಲ್ಲ ಎಲ್ಲ ಮೂಲೆಗಳಿಂದ ಸಾಂಸ್ಕøತಿಕ, ಬೌದ್ಧಿಕ ಜೀವಿಗಳು ಹಾರಿ ಬಂದಿರುವುದು ಅಚ್ಚರಿಮೂಡಿಸಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್, ಸಂಗೀತ ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಹೀಗೆ ಎಲ್ಲದರಲ್ಲಿಯೂ ಬಿಜೆಪಿಯ ವಿರುದ್ಧ ಎಡಪಕ್ಷಗಳಿಗೆ ಜಾತಿಯೇ ಅಸ್ತ್ರವಾಗಿದೆ. ಆದರೆ ಈ ಬಾರಿ ಬಿಜೆಪಿ ಮಿಂಚಿನ ವೇಗದಲ್ಲಿ ಪ್ರತ್ಯುತ್ತರ ನೀಡಿದಾಗ ಎಡಪಕ್ಷಗಳು ಬೆಚ್ಚಿಬಿದ್ದಿವೆ.
ಏಕೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಕಲಾಮಂಡಲಂ ಸತ್ಯಭಾಮಾ ಅವರ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದರು. ಬಳಿಕ ಬಿಜೆಪಿ ನಾಯಕರು ಎಲ್.ಎಲ್. ವಿ. ರಾಮಕೃಷ್ಣನ್ ಅವರ ಮನೆಗೆ ತೆರಳಿ ಬೆಂಬಲ ವ್ಯಕ್ತಪಡಿಸಿದರು. ಇದಲ್ಲದೆ, ಸುರೇಶ್ ಗೋಪಿ ಅವರು ತಮ್ಮ ಕುಟುಂಬದ ದೇವಸ್ಥಾನದಲ್ಲಿ ಎಲ್‍ಎಲ್‍ವಿ ರಾಮಕೃಷ್ಣ ಅವರ ಮೋಹಿನಿಯಾಟ್ಟಂ ಪ್ರದರ್ಶಿಸುವುದಾಗಿ ಭರವಸೆ ನೀಡಿದರು. ಕಲಾಮಂಡಲಂ ಸತ್ಯಭಾಮಾ ಅವರ ಜಾತಿ ನಿಂದನೆಯ ವಿರುದ್ಧ ಬಿಜೆಪಿಯು ಕೇರಳದ ಉಕ್ಕಿನ ಕೋಟೆಯಂತೆ ಆರ್‍ಎಲ್‍ವಿ ರಾಮಕೃಷ್ಣನ್ ಅವರನ್ನು ರಕ್ಷಿಸಿದ್ದರಿಂದ ಎಡ ಕೇಂದ್ರಗಳ ಕಪಟ ಅಟ್ಟಹಾಸ ಉಡುಗುವ ಭೀತಿ ಅವಕ್ಕಿದೆ.
ಅಡೂರ್ ಗೋಪಾಲಕೃಷ್ಣನ್ ಮತ್ತು ಶಂಕರ್ ಅವರನ್ನು ಜಾತಿವಾದದ ಆಧಾರದ ಮೇಲೆ ಕೆ.ಆರ್. ನಾರಾಯಣನ್ ಅವರನ್ನು ಸಂಸ್ಥೆಯಿಂದ ವಜಾಗೊಳಿಸಿದ್ದನ್ನು ಮರೆಯುವಂತಿಲ್ಲ. ಬ್ರಾಹ್ಮಣ ಪ್ರಾಬಲ್ಯವೆಂಬ ಅಸ್ತಿತ್ವದಲ್ಲಿಲ್ಲದ ಹಳೆಯ, ಗುಮ್ಮನನ್ನು ಜನರ ಮನಸ್ಸಿಗೆ ಹೇರುವ ಪ್ರಯತ್ನದಲ್ಲಿ ಸಿಪಿಎಂ ಈ ಬಾರಿ ಸಫಲವಾಗುವಂತೆ ಕಾಣುತ್ತಿಲ್ಲ.