ಕಾಸರಗೋಡು: ಕಾನತ್ತೂರು ಕುಟ್ಟಿಯಾನಂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನಿ ದಾಳಿಯಿಂದ ವ್ಯಾಪಕ ಕೃಷಿನಾಶವುಂಟಾಗಿದೆ. ಕಾನತ್ತೂರು ಬೀಟಿಯಡ್ಕ ಸಮೀಪದ ಕಾಲಿಪಳ್ಳಂ ಎಂಬಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶಗೊಮಡಿದೆ. ಕ್ರಷಿಕರಾದ ರಾಜನ್ ಕಾಲಿಪಳ್ಳಂ, ಶಶಿ, ಟಿ.ಕೆ.ನಾರಾಯಣನ್ ಹಾಗೂ ಪ್ರಶಾಂತ್ ಎಂಬವರ ಕ್ರಷಿಪ್ರದೇಶವನ್ನು ಕಾಡಾನೆ ಹಾಳುಗೆಡಹಿದೆ.
ಶಶಿ ಎಂಬುವವರ ಮನೆ ಸನಿಹದಲ್ಲಿ ಬೆಳೆಯಲಾಗಿದ್ದ ನೂರಕ್ಕೂ ಹೆಚ್ಚು ಬಾಳೆ ಕೃಷಿಯನ್ನು ನಾಶಗೊಳಿಸಿದೆ. ಸಮೀಪದ ನಿವಾಸಿ ಪ್ರಶಾಂತ್ ಎಂಬುವರ ಗದ್ದೆಯಲ್ಲಿದ್ದ ತೆಂಗಿನ ಸಸಿಯನ್ನು ಕಿತ್ತು, ವಿದ್ಯುತ್ ಕಂಬದ ಸ್ಟೇ ವೈರ್ ಮೇಲಕ್ಕೆಸೆದಿದೆ. ಪ್ರಶಾಂತ್ ಅವರ ತೋಡದಲ್ಲಿನ ತೆಂಗು, ಅಡಕೆ, ಬಾಳೆ ಕೃಷಿಯನ್ನು ನಾಶಗೊಳಿಸಿದೆ. ಆನೆ ದಾಳಿ ನಡೆಸಿದಾಗ ಸ್ಥಳಕ್ಕಾಗಮಿಸುವ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆರ್‍ಆರ್‍ಪಿ ತಂಡ ಒಂದಷ್ಟು ಕಾರ್ಯಾಚರಣೆ ನಡೆಸಿ ತೆರಳುವುದು ಬಿಟ್ಟರೆ, ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಡಿ ಗ್ರಾಮವಾದ ಕನ್ನಾಡಿತೋಡ್, ಕೊಯಿತ್ತೋಡ್ ಮತ್ತು ಚೂಲಂಕಲ್ಲ್ ಎಂಬಲ್ಲಿ ಇನ್ನೊಂದು ಕಾಡಾನೆ ವ್ಯಾಪಕವಾಗಿ ಕೃಷಿನಾಶಪಡಿಸಿದೆ. ನಾಡಿಗಿಳಿಯುವ ಆನೆಗಳು ಒಳ ಅರಣ್ಯಕ್ಕೆ ತೆರಳದೆ, ನಾಡಿನೆಲ್ಲೆಡೆ ಕೃಷಿನಾಶಗೊಳಿಸುತ್ತಿರುವುದು ಜನರಲ್ಲಿ ಆತಂಕಕ್ಕೆಡೆಮಾಡಿಕೊಡುತ್ತಿದೆ. ಬಂದಡ್ಕ-ಸುಳ್ಯ ರಸ್ತೆಯಲ್ಲಿ ಕನ್ನಾಡಿತೋಡು ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಚೆಕ್ ಪೆÇೀಸ್ಟ್ ಹೊಂದಿದ್ದು, ಇಲ್ಲಿ ಕರ್ತವ್ಯದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳಲ್ಲೂ ಭೀತಿ ಎದುರಾಗಿದೆ. ಕಟ್ಟಡಕ್ಕೆ ಭದ್ರತಾ ಗೋಡೆ ಇಲ್ಲದೇ ಇರುವುದರಿಂದ ಅರಣ್ಯಾಧಿಕಾರಿಗಳೂ ಆನೆದಾಳಿಯ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.