ಉಪ್ಪಳ: ದೇಶದ ಪ್ರತಿ ಪ್ರಜೆಯು ಕೇಂದ್ರ ಯೋಜನೆಗಳ ಫಲನುಭವಿಗಳು. ಕೇರಳ ಸರ್ಕಾರ ಕೇಂದ್ರದ ಜನಪರ ಯೋಜನೆಗಳನ್ನು ಬುಡಮೇಲುಗೊಳಿಸುವುದನ್ನು ನಿಯಂತ್ರಿಸಲು ನಮ್ಮಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಗೆಲುವು ದಾಖಲಿಸಲು ಕಾರ್ಯಕರ್ತರ ಪ್ರಯತ್ನ ಅತೀ ಅಗತ್ಯ ಎಂದು ಹಿರಿಯ ಬಿಜೆಪಿ ನಾತಾರ ನ್ಯಾಯವಾದಿ ಎಂ.ನಾರಾಯಣ ಭಟ್ ಹೇಳಿದರು.
ಕೈಕಂಬ ಪಂಚಮಿ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಎನ್.ಡಿ.ಎ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಎನ್.ಡಿ.ಎ. ಚುನಾವಣಾ ನಿರ್ವಹಣಾ ಸಮಿತಿಯನ್ನು ಈ ಸಂದರ್ಭ ಘೋಷಿಸಲಾಯಿತು.
ಅರಿಬೈಲು ಗೋಪಾಲ ಶೆಟ್ಟಿ ಸಂಚಾಲಕರಾಗಿ 150 ಮಂದಿ ಜನರ ಸಮಿತಿ ರಚಿಸಲಾಯಿತು.
ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸುರೇಶ ಕುಮಾರ್ ಶೆಟ್ಟಿ ಪೂಕಟ್ಟೆ, ಎ.ಕೆ. ಕಯ್ಯಾರು, ವಿಜಯ ರೈ, ಆದರ್ಶ ಬಿ ಎಂ, ಸುನಿಲ್ ಅನಂತಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಮಯ್ಯ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು.