ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಜನ್ಮ ನಕ್ಷತ್ರದ ಪ್ರಯುಕ್ತ ಭಾನುವಾರ ಶ್ರೀಗಳು ದೈಗೋಳಿಯಲ್ಲಿರುವ ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದರು. ಸೇವಾಶ್ರಮದ ಪ್ರಮುಖರಾದ ಡಾ. ಉದಯಕುಮಾರ್ ದಂಪತಿಗಳು ಶ್ರೀಗಳನ್ನು ಬರಮಾಡಿಕೊಂಡು ಧೂಳಿ ಪೂಜೆ ನೆರವೇರಿಸಿದರು. ಆಶ್ರಮದ ಕಾರ್ಯವೈಖರಿಯನ್ನು ವೀಕ್ಷಿಸಿದ ಶ್ರೀಗಳವರು ಆಶ್ರಮವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.