ಬದಿಯಡ್ಕ: ಗಡಿನಾಡಿನ ಭಾಷಾ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಅಗತ್ಯ ಚಿಂತನೆ ನಡೆಸಲಾಗುವುದು, ಜತೆಗೆ ಈ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಲು ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಣ್ಣ ಬೇವಿನಮರದ ಹೇಳಿದರು.
ಅವರು ಕಾಸರಗೋಡು ಜಿಲ್ಲೆಯ ಕುಂಬ್ಡಾಜೆಯ ಮರಿಕ್ಕಾನ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ, ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಹಿಂದುಳಿದ ಕನ್ನಡ ಶಾಲೆಗಳನ್ನು ಉಳಿಸಿ ಶಿಕ್ಷಣದೊಂದಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕನ್ನಡ ಭಾಷೆಗೆ ಉತ್ತಮ ಸ್ಥಾನಮಾನ ನೀಡುವ ದೂರದೃಷ್ಟಿಯನ್ನು ಸರಕಾರ ಹೊಂದಿದೆ. ಎಎಂದು ತಿಳಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಕೊಠಡಿಗಳನ್ನು ಶಾಸಕ ಎನ್.ಎ. ನೆಲ್ಲಿಕುನ್ನುಉದ್ಘಾಟಿಸಿದರು. ಕನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸಳಿಗೆ, ಕುಂಬ್ಡಾಜೆ ಗ್ರಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ, ಗ್ರಾಂ ಪಂಚಾಯಿತಿ ಸದಸ್ಯ ಅಬ್ದುಲ್ ರಝಾಕ್ ಟಿ.ಎಂ., ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಮವ್ವಾರು, ಮನೋವಿಜ್ಞಾನಿಗಳು, ಪುನರ್ನವ ಟ್ರಸ್ಟ್‍ನ ನಿರ್ದೇಶಕರು ನವೀನ್ ಎಲ್ಲಂಗಳ, ನಿವೃತ್ತ ಮುಖ್ಯಶಿಕ್ಷಕ ಅನಂತ ಭಟ್ಟ ಕುರುಮುಜ್ಜಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ., ಪ್ರಭಾವತಿ ಕೆದಿಲಾಯ ಪುಂಡೂರು, ನಾರಾಯಣನ್ ನಂಬ್ಯಾರ್, ಜೋನ್ ಕ್ರಾಸ್ತ, ಕುರುಮುಜ್ಜಿಕಟ್ಟೆ, ಅಲಿ ತುಪ್ಪೆಕಲ್ಲು, ಮ್ಯಾಥ್ಯೂ, ಶಶಿಧರ ತೆಕ್ಕೆಮೂಲೆ, ಬಾಲಕೃಷ್ಣ ಮಣಿಯಾಣಿ, ಅಬ್ದುಲ್ ಖಾದರ್ ಪಿ., ಶಿವಶಂಕರ ಪಾತೇರಿ, ರಮ್ಯಾ, ಕೃಷ್ಣ ಚಕ್ಕುಡೇಲು, ಸತೀಶ್ ಕುಮಾರ್, ಶಾಲಾ ಪ್ರಬಂಧಕ ಪಿ. ನರಸಿಂಹ ಭಟ್, ನಿವೃತ್ತ ಮುಖ್ಯಶಿಕ್ಷಕ ಗಂಗಾಧರ ರೈ ಯಂ., ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ಪಿ.ಎನ್.ಆರ್.ಅಮ್ಮಣ್ಣಾಯ ಮತ್ತಿತರರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಿ.ರಮೇಶ ಶರ್ಮಾ ಸ್ವಾಗತಿಸಿದರು. ಪ್ರಣವ ಪಿ. ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಿಕೆ ಅರ್ಪಿತ ಸಿ. ವಂದಿಸಿದರು.
ಈ ಸಂದರ್ಭ ಸೇವೆಯಿಂದ ನಿವೃತ್ತರಾಗುವ ಮುಖ್ಯಶಿಕ್ಷಕಿ ಉಷಾ ಕುಮಾರಿ ಎಎ.ನ್. ಹಾಗೂ ಗಾಯತ್ರಿ ಕೆ. ಅವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.