HEALTH TIPS

ಸೂರ್ಯಗ್ರಹಣ ವೀಕ್ಷಣೆಗೆ ಜನಸಂದಣಿ | ಕೆನಡಾದ ನಯಾಗರದಲ್ಲಿ ತುರ್ತು ಪರಿಸ್ಥಿತಿ ಜಾರಿ

Top Post Ad

Click to join Samarasasudhi Official Whatsapp Group

Qries

           ಟೊರಂಟೊ : ಎಪ್ರಿಲ್ 8ರಂದು ನಡೆಯಲಿರುವ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲು ಲಕ್ಷಾಂತರ ವೀಕ್ಷಕರು ಬರುತ್ತಿರುವ ಹಿನ್ನೆಲೆಯಲ್ಲಿ ಕೆನಡಾದ ಒಂಟಾರಿಯೊ ಪ್ರಾಂತದ ನಯಾಗರಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

           ಎಪ್ರಿಲ್ 8ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣವು 1979ರ ಬಳಿಕ ಈ ಪ್ರಾಂತವನ್ನು ಪ್ರಥಮ ಬಾರಿಗೆ ಸ್ಪರ್ಷಿಸಲಿದೆ ಮತ್ತು ನಯಾಗರಾ ಜಲಪಾತವು ಇದನ್ನು ವೀಕ್ಷಿಸಲು ಇರುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಎಂದು `ನ್ಯಾಷನಲ್ ಜಿಯೊಗ್ರಫಿಕ್' ಘೋಷಿಸಿದೆ.

ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವ ಪ್ರದೇಶಗಳಲ್ಲಿ ಇರುವ ನಯಾಗರಾದಲ್ಲಿ ಚಂದ್ರನು ಕೆಲವು              ನಿಮಿಷಗಳ ಕಾಲ ಸೂರ್ಯನ ಕಿರಣಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತಾನೆ. ಎಪ್ರಿಲ್ 8ರಂದು ನಯಾಗರಾ ನಗರಕ್ಕೆ ದಾಖಲೆ ಸಂಖ್ಯೆಯ ಸಂದರ್ಶಕರನ್ನು ಎದುರು ನೋಡುತ್ತಿರುವುದಾಗಿ ನಯಾಗರಾ ಫಾಲ್ಸ್ ಮೇಯರ್ ಜಿಮ್ ಡಿಯೊಡಾಟಿ ಹೇಳಿದ್ದಾರೆ. ಎಪ್ರಿಲ್ 8ರಂದು ಟ್ರಾಫಿಕ್ ಜಾಮ್, ತುರ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ, ಮೊಬೈಲ್ ಫೋನ್‍ಗಳ ನೆಟ್‍ವರ್ಕ್‍ಗಳ ಓವರ್‍ಲೋಡ್ ಮತ್ತಿತರ ಸಮಸ್ಯೆಗಳನ್ನು ನಿಭಾಯಿಸಲು ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries