ಕಾಸರಗೋಡು: 'ಡ್ರೀಮ್ ಬಿಗ್ - ಕಲ್ಪ' ಹೆಸರಿನ ಇನ್‍ಸ್ಟಿಟ್ಯೂಟ್-ಇಂಡಸ್ಟ್ರಿ ಇಂಟರ್‍ಫೇಸ್ ಕಾರ್ಯಕ್ರಮ ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐನಲ್ಲಿ ಜರುಗಿತು. ಹೂಡಿಕೆದಾರ ನಾಗರಾಜ ಪ್ರಕಾಶಂ ಉದ್ಘಾಟಿಸಿ ಮಾತನಾಡಿ, ಸಿಪಿಸಿಆರ್‍ಐ ಸಂಸ್ಥೆಯ ಮೌಲ್ಯವರ್ಧಿತ ತಂತ್ರಜ್ಞಾನಗಳು ಕೃಷಿಕರಿಗೆ ಹೆಚ್ಚಿನ ಬಲ ತಂದುಕೊಟ್ಟಿದ್ದು, ರೈತರ ಉತ್ಪನ್ನಗಳಿಗೆ ಉತ್ತಮ ಧಾರಣೆ ತಂದುಕೊಡುವಲ್ಲಿ ಸಹಾಯಕವಾಗಿದೆ ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಾಲಚರದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿಯ ಉತ್ತೇಜನದ ಜತೆಗೆ ಪರಿಸರ ಸಂರಕ್ಷಣೆಗೆ ಪೂರಕವಾಗುವ ರೀತಿಯಲ್ಲಿ ಕೃಷಿ ತಂತ್ರಜ್ಞಾನಗಳು ಬೆಳೆದು ಬರಬೇಕಾಗಿದೆ ಎಂದು ತಿಳಿಸಿದರು
ವಿಜ್ಞಾನಿ, ಇಸ್ರೋ ಬೆಂಗಳೂರಿನ ಜಿ.ಏಂಡ್ ಜನರಲ್ ಮೆನೇಜರ್ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‍ನ ಡಾ. ರಾಮಚಂದ್ರ ಹೆಬ್ಬಾರ್, ಕೋಝಿಕ್ಕೋಡ್‍ನ ಸಿಡಬ್ಲ್ಯೂಆರ್‍ಡಿಎಂನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮನೋಜ್ ಪಿ. ಸ್ಯಾಮ್ಯುಯೆಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಐಸಿಎಆರ್-ಸಿಪಿಸಿಆರ್‍ಐ ಪ್ರಿನಸಿಪಲ್ ಇನ್‍ವೆಸ್ಟಿಗೇಟರ್ ಡಾ. ಕೆ. ಮುರಳೀಧರನ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ಸಿಪಿಸಿಆರ್‍ಐನ ವಿವಿಧ ತಂತ್ರಜ್ಞಾನಗಳ ಬಗ್ಗೆ ಸಮವಾದ ನಡೆಯಿತು. ಮೈಕ್ರೋಬಿಯಲ್ ಪೆÇ್ರೀಬಯಾಟಿಕ್ ತಂತ್ರಜ್ಞಾನಗಳ ಬಗ್ಗೆ ಶಿವಕುಮಾರ್, ಇಕೋ-ಫೈಟೋಕೇರ್, ಮೈಸೂರು, ಕಲ್ಪ ಮಣ್ಣಿನ ಆರೈಕೆ ಬಗ್ಗೆ ಪೌಲೋಸ್, ಗ್ರಾಮಲಕ್ಷ್ಮಿ, ಕಲ್ಪರಸದ ಬಗ್ಗೆ , ರಾಮನಗರ ತೆಂಗು ಉತ್ಪಾದಕ ಕಂಪನಿಯ ಅಭಿಷೇಕ್ ಮತ್ತು ತಂಡದ ಸದಸ್ಯರು, ತೆಂಗಿನಕಾಯಿ ಚಿಪ್ಸ್ ಬಗ್ಗೆ ಪ್ರವೀಣ್ ಅವರು ಆಶಯ ವಿನಿಮಯ ನಡೆಸಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.