ಇಡುಕ್ಕಿ: ಮುನ್ನಾರ್‍ನಲ್ಲಿ ಕಾಡಾನೆಯ ಮುಂದೆ ಪೋಟೋ ತೆಗೆದವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ರವಿ ಮತ್ತು ಸೆಂಥಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆನೆ ವಿಕೋಪಕ್ಕೊಳಗಾಗಿ ದಾಳಿ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಮುನ್ನಾರ್‍ನ ಸೆವೆನ್‍ಮಾಲಾ ಎಸ್ಟೇಟ್‍ನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.
ಒಂಟಿಸಲಗನಿಂದ ಕೇವಲ 20 ಮೀಟರ್ ದೂರದಿಂದ ಚಿತ್ರ ತೆಗೆಯಲಾಗಿದೆ. ಆನೆ ನಿಂತಿದ್ದ ಸ್ಥಳವನ್ನು ಕಂಡು ಪೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಭಾರೀ ಟೀಕೆಗೊಳಗಾಗಿದ್ದರು.