ತಿರುವನಂತಪುರಂ: ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಿದ್ದಕ್ಕಾಗಿ ದೇಶದಲ್ಲಿ ಮೂರು ವಾರಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಿಸಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಮೂಲದ ಎಂ.ವಿ.ಶರಪುದ್ದೀನ್ ಬಂಧಿತ ಆರೋಪಿ.
ಕೋವಿಡ್‍ನಿಂದಾಗಿ ಲಾಕ್‍ಡೌನ್ ಸಮಯದಲ್ಲಿ ಸುದ್ದಿಯೊಂದರ ಸ್ಕ್ರೀನ್‍ಶಾಟ್ ಅನ್ನು ಆತ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ. ಕೊಚ್ಚಿ ಸೈಬರ್ ಡೋಮ್ ನಡೆಸಿದ ಸಾಮಾಜಿಕ ಮಾಧ್ಯಮ ಗಸ್ತು ಸಂದರ್ಭದಲ್ಲಿ ಇದು ಪತ್ತೆಯಾಗಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವ ಮತ್ತು ಹರಡುವವರನ್ನು ಪತ್ತೆಹಚ್ಚಲು ಸೈಬರ್ ವಿಭಾಗದ ನೇತೃತ್ವದಲ್ಲಿ ಸೈಬರ್ ಪೋಲೀಸ್ ಪ್ರಧಾನ ಕಚೇರಿ, ಎಲ್ಲಾ ಶ್ರೇಣಿಗಳು ಮತ್ತು ಎಲ್ಲಾ ಪೋಲೀಸ್ ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಸೆಲ್ ಗಳನ್ನು ರಚಿಸಲಾಗಿದೆ.