ಮುಂಬೈ: ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಸೋಮವಾರದ ಏರಿಳಿತದ ವಹಿವಾಟಿನಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳ ಕಂಡಿವೆ. ಏಕೆಂದರೆ ಎಚ್ಚರಿಕೆಯ ಹೂಡಿಕೆದಾರರು ಈ ವಾರದ ಅಮೆರಿಕದ ಫೆಡ್ ಬಡ್ಡಿ ದರದ ನಿರ್ಧಾರ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ಮುಂಚಿತವಾಗಿ ಸುರಕ್ಷಿತವಾಗಿ ಉಳಿಯಲು ಆದ್ಯತೆ ನೀಡಿದರು.
ಮುಂಬೈ: ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಸೋಮವಾರದ ಏರಿಳಿತದ ವಹಿವಾಟಿನಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳ ಕಂಡಿವೆ. ಏಕೆಂದರೆ ಎಚ್ಚರಿಕೆಯ ಹೂಡಿಕೆದಾರರು ಈ ವಾರದ ಅಮೆರಿಕದ ಫೆಡ್ ಬಡ್ಡಿ ದರದ ನಿರ್ಧಾರ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಗೆ ಮುಂಚಿತವಾಗಿ ಸುರಕ್ಷಿತವಾಗಿ ಉಳಿಯಲು ಆದ್ಯತೆ ನೀಡಿದರು.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 104.99 ಅಂಕಗಳು ಅಥವಾ ಶೇಕಡಾ 0.14 ರಷ್ಟು ಏರಿಕೆಯಾಗಿ 72,748.42 ಕ್ಕೆ ಸ್ಥಿರವಾಯಿತು. ಹಗಲಿನಲ್ಲಿ, ಇದು ಗರಿಷ್ಠ 72,985.89 ಮತ್ತು ಕನಿಷ್ಠ 72,314.16 ನಡುವೆ ಓಲಾಡಿತು.
ನಿಫ್ಟಿ ಸೂಚ್ಯಂಕವು 32.35 ಅಂಕಗಳು ಅಥವಾ ಶೇಕಡಾ 0.15 ರಷ್ಟು ಏರಿಕೆಯಾಗಿ 22,055.70 ಕ್ಕೆ ತಲುಪಿತು.
ಪ್ರಮುಖ ಷೇರುಗಳ ಪೈಕಿ ಟಾಟಾ ಸ್ಟೀಲ್ ಶೇಕಡಾ 5 ರಷ್ಟು ಜಿಗಿಯಿತು. ಮಹೀಂದ್ರಾ ಆಯಂಡ್ ಮಹೀಂದ್ರಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಾರುತಿ ಇತರ ಕಂಪನಿಗಳ ಷೇರುಗಳು ಹೆಚ್ಚಿನ ಲಾಭ ಗಳಿಸಿದವು. ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೈಟಾನ್, ವಿಪ್ರೋ, ಹಿಂದೂಸ್ತಾನ್ ಯೂನಿಲಿವರ್ ಮತ್ತು ನೆಸ್ಲೆ ಷೇರುಗಳು ಕುಸಿತ ಕಂಡವು. ಆಟೋ, ಲೋಹ, ಸರಕುಗಳು ಮತ್ತು ಹೆಲ್ತ್‌ಕೇರ್ ಷೇರುಗಳು ಲಾಭ ಗಳಿಸಿದರೆ, ಐಟಿ ಮತ್ತು ಟೆಕ್ ಷೇರುಗಳು ನಷ್ಟವನ್ನು ಎದುರಿಸಿದವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಏರಿಕೆ ಕಂಡವು. ಐರೋಪ್ಯ ಮಾರುಕಟ್ಟೆಗಳು ಲಾಭ ಗಳಿಸಿದವು. ಶುಕ್ರವಾರ ಅಮೆರಿಕದ ಮಾರುಕಟ್ಟೆಗಳು ನಷ್ಟ ಅನುಭವಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 848.56 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಶುಕ್ರವಾರ 453.85 ಅಂಕಗಳು ಅಥವಾ 0.62 ರಷ್ಟು ಕುಸಿದು 72,643.43 ಕ್ಕೆ ಸ್ಥಿರವಾಗಿತ್ತು. . ಎನ್‌ಎಸ್‌ಇ ನಿಫ್ಟಿ 123.30 ಅಂಕಗಳು ಅಥವಾ ಶೇಕಡಾ 0.56 ರಷ್ಟು ಕುಸಿದು 22,023.35 ಕ್ಕೆ ತಲುಪಿತ್ತು.