ಕಾಸರಗೋಡು: ದೀರ್ಘ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿರುವ ಸೂರ್ಯನಾರಾಯಣ ಭಟ್ ಎಡನೀರು ಅವರಿಗೆ ಅಭಿನಂದನಾ ಸಮಾರಂಭ ಮಾ 31ರಮದು ಬೆಳಗ್ಗೆ 11ಕ್ಕೆ ಶ್ರೀ ಎಡನೀರು ಮಠದ ಭಾರತೀ ಸದನದಲ್ಲಿ ಜರುಗಲಿದೆ. ಶ್ರೀ ಮಠದ ಶಿಷ್ಯರಾಗಿ, ಸಕ್ರಿಯ ಕಾರ್ಯಕರ್ತನಾಗಿ, ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ದೀರ್ಘ ಕಾಳ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು ಮಾ. 31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೂರ್ಣಾನುಗ್ರಹದೊಂದಿಗೆ ಕಾರ್ಯಕ್ರಮ ಜರುಗಲಿದೆ. ಚಿನ್ಮಯ ಮಿಶನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಪಾಲ್ಗೊಳ್ಳುವರು.