ನವದೆಹಲಿ: ಜೈಲಿನಲ್ಲಿದ್ದಾಗ ಮುದ್ರಣ ಕೌಶಲ್ಯ ಕಲಿತಿದ್ದ ವ್ಯಕ್ತಿಯೋರ್ವ ಬಿಡುಗಡೆಯಾದ ಬಳಿಕ ಆ ಕೌಶಲ್ಯವನ್ನು ನಕಲಿ ನೋಟುಗಳ ಮುದ್ರಣಕ್ಕೆ ಬಳಸಿಕೊಂಡಿದ್ದಾನೆ. ಮಧ್ಯಪ್ರದೇಶದ 35 ವರ್ಷದ ಭೂಪೇಂದ್ರ ಸಿಂಗ್ ಧಾಕತ್ ಎಂಬ ವ್ಯಕ್ತಿಯನ್ನು ನಕಲಿ ಕರೆನ್ಸಿ ನೋಟು ಮುದ್ರಣದ ಆರೋಪದ ಮೇಲೆ ಬಂಧಿಸಲಾಗಿದ್ದು 200 ರೂಪಾಯಿ ಮುಖಬೆಲೆಯ 95 ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ನೋಟುಗಳ ಹೊರತಾಗಿ ಕಲರ್ ಪ್ರಿಂಟರ್, 6 ಇಂಕ್ ಬಾಟಲ್ ಗಳು ಹಾಗೂ ನಕಲಿ ನೋಟುಗಳ ಮುದ್ರಣಕ್ಕೆ ಬಳಕೆ ಮಾಡುತ್ತಿದ್ದ ಪೇಪರ್ ಗಳನ್ನು ಪೊಲೀಸರು ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ ಎಂದು ಸಿರೊಂಜ್ ಉಪವಿಭಾಗಾಧಿಕಾರಿ ಉಮೇಶ್ ತಿವಾರಿ ಪಿಟಿಐಗೆ ತಿಳಿಸಿದ್ದಾರೆ.