HEALTH TIPS

ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಧೋನಿ; ಚಿರತೆ ವೇಗ ಅಂದ್ರು ಫ್ಯಾನ್ಸ್.

            ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​) ತನ್ನ 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಹಣಾಹಣಿಯಲ್ಲಿ ಸಿಎಸ್​ಕೆ 63 ರನ್ ಗಳ ಜಯ ಸಾಧಿಸಿತ್ತು. ಇದೀಗ ನಿನ್ನೆಯ ಪಂದ್ಯದಲ್ಲಿ ಎಂಎಸ್ ಧೋನಿ ಹಿಡಿದ ಕ್ಯಾಚ್ ಸಂಚಲನ ಮೂಡಿಸಿದೆ.

          ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

              ಗುಜರಾತ್ ಟೈಟಾನ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಗುಜರಾತ್ ತಂಡ 7.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿತು. ಮಿಚೆಲ್ ಎಸೆದ ಬಾಲ್ ಗೆ ಶಂಕರ್ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು.


                ನಿನ್ನೆಯ ಪಂದ್ಯದಲ್ಲಿ ಮೊದಲು ಬಂದ ಸಿಎಸ್ ಕೆ ಆರು ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು. ಈ ಗುರಿಯನ್ನು ಸಾಧಿಸದ ಗುಜರಾತ್ ತಂಡ 143 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.

            ಮಿಚೆಲ್ ಎಸೆದ ಬಾಲ್ ಗೆ ಶಂಕರ್ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್​​ಗೆ ಮರಳಿದರು. ಧೋನಿ ಹಿಡಿದ ಕ್ಯಾಚ್ ಅದ್ಭುತವಾಗಿ ಮೂಡಿಬಂದಿದೆ. ಈ ಪದ್ಯದ ಈ ಅದ್ಭುತವಾದ ಕ್ಷಣದ ವಿಡಿಯೋ ವೈರೆಲ್​ ಆಗಿದೆ.

             ಧೋನಿ ಚೆಂಡನ್ನು ಚಿರತೆಯಂತೆ ಹಾರಿ ಹಿಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಧೋನಿ ಫ್ಯಾನ್ಸ್​​ ಚಿರತೆ ವೇಗೆ ಎಂದು ಬರೆದುಕೊಂಡು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವು ನಿಮ್ಸ್​​ಗಳು ವೈರಲ್​ ಆಗುತ್ತಿವೆ. ಧೋನಿಗೆ 42 ವರ್ಷ ಆಗಿದ್ರು ಇನ್ನು ಅದೇ ಫಿಟ್ ಮತ್ತು ಪವರ್ ನಲ್ಲಿ ಫೀಲ್ಡಿಂಗ್ ಮಾಡುವ ವೈಖರಿ ಸಕತ್ ಆಗಿದೆ ಎಂದಿದ್ದಾರೆ ಫ್ಯಾನ್ಸ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries