ಬದಿಯಡ್ಕ : ನೀರ್ಚಾಲು ಸಮೀಪದ ಕನ್ನೆಪ್ಪಾಡಿಯಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಕೊಡ್ಯಮ್ಮೆ ಅಂತಲ ಮೋಗೇರ ಚಾವಡಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ1 ರಿಂದ 4ರ ವರೆಗೆ ನಡೆಯಲಿದ್ದು, ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆ ಕನ್ನೆಪ್ಪಾಡಿಯ ಅಂತಲ ಮೊಗೇರ ಚಾವಡಿಯ ಪರಿಸರದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬದಿಯಡ್ಕ ಗ್ರಾ.ಪಂ.ಸದಸ್ಯೆ ಜಯಶ್ರೀ,ಸಿ.ಐ ಬಾಲಕೃಷ್ಣ, ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಬಾಲಕೃಷ್ಣ ನೀರ್ಚಾಲು, ಮದನ ಕೆ. ಮೊದಲಾದವರು ಮಾತನಾಡಿದರು.
ಶ್ರೀದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರಂಭಗೊಂಡ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕೆ.ಕೆ.ಸ್ವಾಮಿಕೃಪಾ ಸ್ವಾಗತಿಸಿದರು. ಪುನರ್ ಪ್ರತಿμÁ್ಠ ಮಹೋತ್ಸವದ ಯಶಸ್ವಿ ಸಮಿತಿ ಅಧ್ಯಕ್ಷರಾಗಿ ಡಾಶ್ರಿನಿಧಿ ಸರಳಾಯ ಬದಿಯಡ್ಕ, ಪ್ರಧಾನ ಸಂಚಾಲಕರಾಗಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ನೇತೃತ್ವದಲ್ಲಿ ಸುಮಾರು 501 ಜನರನ್ನೊಳಗೊಂಡ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಹಾಗೂ ಪ್ರತಿμÁ್ಠ ಮಹೋತ್ಸವದ ಕಾರ್ಯಗಳಿಗೆ ಸುಮಾರು 75 ಸಾವಿರ ರೂಗಳ ದೇಣಿಗೆ ವಾಗ್ದಾನ ನೀಡಿದ ಕೃಷ್ಣನ್ ಕತ್ತಾರ್ ಅವರನ್ನು ಅಭಿನಂದಿಸಲಾಯಿತು. ಸುಂದರ ಕಟ್ನಡ್ಕ ವಂದಿಸಿದರು.