ತಿರುವನಂತಪುರಂ: ಹೊಸ ಬರಹಗಾರರಲ್ಲಿ ಈ ಜಗತ್ತು ಚೆನ್ನಾಗಿಲ್ಲ ಎಂಬ ಹತಾಶೆ ಮನೆಮಾಡಿದೆಯೇ? ಹೌದು ಅಂತಹ ಭಾವನೆ ಇದೆಯೆಂದು ಕೇರಳ ಮಾನವ ಹಕ್ಕುಗಳ ಆಯೋಗದ ಕಾರ್ಯಾಧ್ಯಕ್ಷ ಕೆ. ಬೈಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಹೊರಹೊಮ್ಮುತ್ತಿರುವ ಹೊಸ ಯುಗದ ಬರಹಗಾರರಲ್ಲಿ ಈ ಚಿಂತನೆಯು ಪ್ರಬಲವಾಗಿದೆ ಎಂಬುದನ್ನು ಅವರು ಗಮನಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋಯಿಕ್ಕೋಡ್‍ನಲ್ಲಿ ನಡೆದ ಅಭಯದೇವ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇದರೊಂದಿಗೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೊಸ ಬರಹಗಾರರು, ಈ ರೀತಿ ಆಗಲು ಸಮಾಜವನ್ನೇ ದೂಷಿಸುತ್ತಾರೆ. ಹೊಸ ಪೀಳಿಗೆಯಲ್ಲಿ ಸ್ವಾರ್ಥ, ಅಹಂಕಾರ ಮತ್ತು ಪರಸ್ಪರ ಗೌರವದ ಕೊರತೆಯೂ ಕಂಡುಬರುತ್ತಿದೆ ಎಂದು ವೀಕ್ಷಕರು ಎತ್ತಿ ತೋರಿಸುತ್ತಾರೆ. ಇದರಿಂದಲೇ ಕೆಲವರು ಬರಹಗಾರರಾಗಿ ಹೊರಹೊಮ್ಮುತ್ತಾರೆ. ಅವರ ನೀಚ ಬರಹಗಳು ಶ್ರೇಷ್ಠವೆಂದು ಬಿಂಬಿಸಲಾಗುತ್ತಿದೆ.
ಪ್ರಶಸ್ತಿಗಳು ಬಹುತೇಕ ಅಂತಹ ಜನರಿಗೆ ಮಾತ್ರ ಲಭಿಸುತ್ತವೆ. ಅದನ್ನು ಒದಗಿಸಲು ವಿಶೇಷ ಲಾಬಿಗಳು ಕೆಲಸ ಮಾಡುತ್ತವೆ. ಅವರ ಪುಸ್ತಕಗಳನ್ನು ಯಾರೂ ಓದುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಹರಡುವಿಕೆಯೊಂದಿಗೆ, ಅವರು ತಮ್ಮನ್ನು ಹೊಗಳಿಕೊಳ್ಳುವ ಸ್ಪಷ್ಟ ಪೋಸ್ಟ್‍ಗಳನ್ನು ಮಾಡಲು ಸಹ ಹಿಂಜರಿಯುವುದಿಲ್ಲ.
ಇಂತಹವರನ್ನು ಬೆಂಬಲಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಪೋರ್ಟ್ ಗ್ರೂಪ್ ಕೂಡ ಇದೆ. ಪರಸ್ಪರ ಬೆನ್ನು ಚಪ್ಪರಿಸಿಕೊಳ್ಳುವುದು ಅವರ ಸ್ವಭಾವವಾಗಿದೆ. ಈ ಜನ ಸಾಂಸ್ಕøತಿಕ ವೀರರು ಮತ್ತು ನಾಡಿನ ಪ್ರವರ್ತಕರಾಗುತ್ತಾರೆಯೇ ಹೊರತು ಸಾಹಿತ್ಯಕ್ಕೆ ಯಾವುದೇ ಕೊಡುಗೆ ನೀಡುವುದಿಲ್ಲ ಎಂಬುದು ವಾಸ್ತವ. ಇಂತಹ ನಕಲಿ ಮೂರ್ತಿಗಳೇ ಎಲ್ಲೆಡೆ ತುಂಬಿ ತುಳುಕುತ್ತಿರುವಾಗ ನಿಜಕ್ಕೂ ಪ್ರತಿಭಾವಂತರು ನಿರಾಶರಾಗದೇ ಇದ್ದರೆ ಆಶ್ಚರ್ಯವೇ ಎಂದು ಓದುಗರು ಕೇಳುತ್ತಾರೆ.