ಕಾಸರಗೋಡು: ಹಣಕಾಸು ವರ್ಷದ ಕೊನೆಯ ದಿನಗಳಲ್ಲಿ ರಜಾದಿನಗಳನ್ನು ಪರಿಗಣಿಸದೆ ಜಿಲ್ಲಾ ಖಜಾನೆ ತೆರೆದು ಕಾರ್ಯ ನಿರ್ವಹಿಸಿತು. ಜಿಲ್ಲಾ ಖಜಾನೆ ಮಾತ್ರವಲ್ಲದೆ ಜಿಲ್ಲೆಯ ಏಳು ಉಪ ಖಜಾನೆಗಳು ರಜಾದಿನದಲ್ಲಿ ಕಾರ್ಯನಿರ್ವಹಿಸುವಮೂಲಕ ವಿವಿಧ ಬಿಲ್ ಮಂಜೂರುಗೊಳಿಸುವಲ್ಲಿ ಸಹಕಾರಿಯಾಯಿತು. ಬಾಕಿ ಉಳಿದ ಸರ್ಕಾರಿ ಬಿಲ್ ಮತ್ತು ರಸೀದಿಗಳನ್ನು ಪಾಸ್ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾ ಮತ್ತು ಉಪ ಖಜಾನೆಗಲ ಎಲ್ಲಾ ಸಿಬ್ಬಂದಿ ಹಾಜರಿದ್ದು, ಕರ್ತವ್ಯ ನಿರ್ವಹಿಸಿದರು.