ಭೂಮಿ ಮೇಲೆ ಜೀವರಾಶಿಗಳು ಆರಂಭವಾಗಿದ್ದೇ ಮಳೆಯಿಂದಾಗಿ. ಮೊದಲು ಬೆಂಕಿ ಚೆಂಡಿನಂತಿದ್ದ ಭೂಮಿ ನಿರಂತರ ಮಳೆಯ ಕಾರಣದಿಂದಾಗಿ ತಂಪಾಗುತ್ತಾ ಬಂದು ಈಗ ಸೌರಮಂಡಲದ ಏಕೈಕ ಜೀವ ರಾಶಿ ಇರುವ ಗ್ರಹವಾಗಿದೆ. ವರ್ಷದಲ್ಲಿ ಮಳೆಗಾಲ ಅತ್ಯಂತ ಪ್ರಿಯವಾದ ಕಾಲ ಎನ್ನಲಾಗುತ್ತದೆ. ಏಕೆಂದರೆ ಮಳೆಗಾದಲ್ಲಿ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಎಲ್ಲಾ ಕಡೆ ಹಸಿರು ತುಂಬಿಕೊಳ್ಳುತ್ತದೆ.
ಆದರೆ ಕೆಲವು ಭಾಗದಲ್ಲಿ ಮಳೆ ಬಾರದೆ ಭೀಕರ ಬರಗಾಲವೂ ಆವರಿಸಿಕೊಳ್ಳುತ್ತದೆ. ಇದರಿಂದ ನೂರಾರು ಸಮಸ್ಯೆ ಎದುರಾಗುತ್ತದೆ. ಮಳೆಯಾಗದಿದ್ದರೆ ಕೃಷಿ ಮಾಡಲಾಗಲ್ಲ, ಕುಡಿಯಲು ನೀರು ಸಿಗಲ್ಲ, ಪ್ರಾಣಿ ಪಕ್ಷಿಗಳ ಪಾಡಂತು ಹೇಳತೀರದ್ದಾಗುತ್ತದೆ. ಆದರೆ ಭೂಮಿ ರೂಪುಗೊಂಡು ಶತಮಾನಗಳೇ ಕಳೆದರು ಮಳೆ ಬರುತ್ತಲೇ ಇದೆ. ಆದರೆ ಕೆಲವು ಕಡೆ ಕಡಿಮೆ ಮಳೆಯಾಗುವ ಕಾರಣ ಮರುಭೂಮಿಯನ್ನೂ ನಾವು ಕಾಣಬಹುದಾಗಿದೆ.
ಆದರೆ ನಿಮಗೆ ಗೊತ್ತಾ ಸೌರ ಮಂಡಲದಲ್ಲಿರುವ ನಮ್ಮ ಭೂಮಿ ಮೇಲೆ ಮಾತ್ರ ಮಳೆಯಾಗುವುದಿಲ್ಲ ಬದಲಿಗೆ ಬೇರೆ ಗ್ರಹಗಳಲ್ಲು ಮಳೆಯಾಗುತ್ತದೆ. ಆದರೆ ಅಲ್ಲೊಂದು ವಿಶೇಷವಿದೆ ಆ ವಿಶೇಷವೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಆದರೆ ನಿಮಗೆ ಗೊತ್ತಾ ಸೌರ ಮಂಡಲದಲ್ಲಿರುವ ನಮ್ಮ ಭೂಮಿ ಮೇಲೆ ಮಾತ್ರ ಮಳೆಯಾಗುವುದಿಲ್ಲ ಬದಲಿಗೆ ಬೇರೆ ಗ್ರಹಗಳಲ್ಲು ಮಳೆಯಾಗುತ್ತದೆ. ಆದರೆ ಅಲ್ಲೊಂದು ವಿಶೇಷವಿದೆ ಆ ವಿಶೇಷವೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ನಾವು ಮೊದಲೇ ಹೇಳಿದ್ದಂತೆ ಭೂಮಿ ಮಾನವ ಮತ್ತು ಪ್ರಾಣಿ ಸಂಕುಲ ವಾಸಿಸಲು ಯೋಗ್ಯವಾಗಿರುವ ಗ್ರಹವಾಗಿದೆ. ಸೌರವ್ಯೂಹದಲ್ಲಿ ಉಳಿದ ಗ್ರಹಗಳ ಮೇಲೆಯೂ ನೀರಿದೆಯೇ ಅಲ್ಲಿ ಮಳೆಯಾಗುತ್ತದೆಯೇ? ವಾಸಯೋಗ್ಯವೇ ಎಂಬ ಕುರಿತು ಅಧ್ಯಯನಗಳು ನಡೆಯುತ್ತಲೇ ಇದೆ. ಆದರೆ ಭೂಮಿ ಬಿಟ್ಟು ಉಳಿದ ಗ್ರಹದಲ್ಲು ಮಳೆಯಾಗುತ್ತದೆ ಎಂದು ತಿಳಿದುಬಂದಿದೆ.
ಶನಿ ಗ್ರಹದಲ್ಲಿ ವಜ್ರದ ಮಳೆ
ನೀವು ಕೇಳಿದರೆ ಅಚ್ಚರಿ ಪಡುತ್ತೀರ. ಶನಿ ಗ್ರಹದ ಮೇಲೆ ನೀರಿನ ಮಳೆಯಲ್ಲ ಬದಲಿಗೆ ವಜ್ರದ ಮಳೆಯಾಗುತ್ತದಂತೆ. ಹೌದು ವಜ್ರಗಳು, ವರ್ಷಕ್ಕೆ ಸುಮಾರು 1,000 ಟನ್‌ಗಳು (907 ಮೆಟ್ರಿಕ್ ಟನ್‌ಗಳು) ಶನಿಗ್ರಹದ ಮೇಲೆ ಬೀಳುವ ವಜ್ರದ ಪ್ರಮಾಣವಾಗಿದೆ. ಆದರೆ ಇದು ನಾಸಾ ತಿಳಿಸಿರುವ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯ ಸಿದ್ಧಾಂತವಾಗಿದೆ ಆದರೆ ಈ ಸಿದ್ಧಾಂತ ಇನ್ನೂ ಸಾಬೀತಾಗಿಲ್ಲ. ಆದರೆ ಅಲ್ಲಿ ವಜ್ರದ ಮಳೆಯಾಗುತ್ತದೆ ಎಂದು ಗಾಢವಾಗಿ ನಂಬಲಾಗಿದೆ.
ಬರಿ ಶನಿ ಗ್ರಹ ಮಾತ್ರವಲ್ಲ ಗುರು ಹಾಗೂ ನೆಪ್ಚೂನ್ ಗ್ರಹದಲ್ಲೂ ಈ ರೀತಿ ವಜ್ರದ ಮಳೆ ಸುರಿಯುತ್ತದೆ. ಆದರೆ ಶನಿ ಗ್ರಹದ ವಾತಾವರಣವು ಹೆಚ್ಚು ಪೂಕರವಾಗಿದೆ ಎಂಬುದು ಖಗೋಳ ತಜ್ಞರ ವಾದವಾಗಿದೆ. ಆದರೆ ಈ ವಜ್ರಗಳು ಶನಿಯ ಮೇಲ್ಮೈ ತಲುಪಿ ಹೆಚ್ಚಿನ ಶಾಖದ ಕಾರಣದಿಂದಾಗಿ ಅವು ಕರಗುತ್ತವೆ. ಅಲ್ಲಿ ವಜ್ರದ ಮಳೆ ಸುರಿಯಲು ಅಲ್ಲಿನ ತಾಪಮಾನ ಹಾಗೂ ವಾತಾವರಣದಲ್ಲಿರುವ ರಾಸಾಯನಿಕಯುಕ್ತ ಗಾಳಿಯೇ ಕಾರಣ ಎಂಬುದು ವಿಜ್ಞಾನಿಗಳು ನೀಡುವ ಕಾರಣವಾಗಿದೆ.
ಶುಕ್ರನಲ್ಲಿ ಸುರಿಯುತ್ತೆ ಆಸಿಡ್ ಮಳೆ?
ಸೌರಮಂಡಲದ ಮತ್ತೊಂದು ಗ್ರಹವಾಗಿರುವ ಶುಕ್ರನಲ್ಲೂ ಮಳೆಯಾಗುತ್ತದೆ. ಆದರೆ ಈ ಮಳೆ ಹನಿ ನಿಮಗೆ ತಾಕಿದರೆ ಸುಡಲಿದೆ. ಏಕೆಂದರೆ ಅಲ್ಲಿ ಆಸಿಡ್ ಮಳೆಯಾಗಲಿದೆ. ಹೌದು ಶುಕ್ರದಲ್ಲಿ ಸಲ್ಫ್ಯೂರಿಕ್ ಆಮ್ಲದಿಂದ ಕುಡಿದ ಮಳೆಯಾಗುತ್ತದೆ. ಅಲ್ಲಿ ನಿರ್ಮಾಣವಾಗುವ ಮೋಡದಲ್ಲಿಯೇ ಈ ರಾಸಾಯನಿಕಗಳು ತುಂಬಿರುತ್ತವೆ. ವಾತಾವರಣದಲ್ಲೂ ವಿಷಾನಿಲವೇ ತುಂಬಿದ್ದು, ಮಳೆಯಾದಾಗ ಇದು ಆಸಿಡ್ ಆಗಿ ಬದಲಾಗುತ್ತದೆ.
ಶನಿಯ ಚಂದ್ರ ಟೈಟಾನ್‌ನಲ್ಲಿ ಭೂಮಿಯಂತೆ ವರ್ಷಕ್ಕೊಮ್ಮೆ ಮಳೆ
ಭೂಮಿಯಲ್ಲಿ ವರ್ಷಕ್ಕೊಮ್ಮೆ ಬರುವ ಮಳೆಗಾಲದಂತೆ ಶನಿ ಗ್ರಹದ ಚಂದ್ರ ಟೈಟಾನ್ ಮೇಲೆಯೂ ಮಳೆಗಾಲವಿದೆ. ಆದರೆ ಅಲ್ಲಿ ಮೀಥೇನ್ ಸುರಿಯುತ್ತದೆ. ಅಲ್ಲಿ ಮೀಥೇನ್ ಸರೋವರಗಳಿವೆ ಎನ್ನಲಾಗಿದೆ. ಇದೇ ಮೀಥೇನ್ ಆವಿಯಾಗಿ ಮತ್ತೆ ಸುರಿಯುತ್ತದೆ. ಅಲ್ಲಿ ಮೈನಸ್ 290 ಡಿಗ್ರಿ ಸೆಲ್ಸಿಯನ್ ತಾಪಮಾನ ಇರುವುದರಿಂದ ಮೀಥೇನ್ ದ್ರವರೂಪದಲ್ಲಿದೆ.