HEALTH TIPS

ಎಡಪಕ್ಷಗಳು 'ಬಿಜೆಪಿಯ ಆಟವಾಡುತ್ತಿರುವುದು' ವಿಪರ್ಯಾಸ: CPI ವಿರುದ್ಧ ತರೂರ್‌ ಕಿಡಿ

            ವದೆಹಲಿ: ವಯನಾಡಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅಭ್ಯರ್ಥಿತನವನ್ನು ಪ್ರಶ್ನಿಸಿ ಮೈತ್ರಿ ಧರ್ಮದ ಬಗ್ಗೆ ಬೋಧನೆ ಮಾಡುವ ಎಡಪಕ್ಷಗಳು ತಿರುವನಂತಪುರದಲ್ಲಿ 'ಬಿಜೆಪಿಯ ಆಟವಾಡುತ್ತಿರುವುದು' ವಿಪರ್ಯಾಸ ಎಂದು ಕಾಂಗ್ರೆಸ್‌ನ ನಾಯಕ ಶಶಿ ತರೂರ್‌ ಮಂಗಳವಾರ ಸಿಪಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

             'ನನ್ನ ವಿರುದ್ಧ ಕ್ಷೇತ್ರದಲ್ಲಿ ಸಿಪಿಐ ನಡೆಸಿದ ಪ್ರಚಾರದ ಏಕೈಕ ಪರಿಣಾಮ ಎಂದರೆ, ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವುದಾಗಿದೆ' ಎಂದು ತಿರುವನಂತರಪುರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಶಶಿ ತರೂರ್‌ ದೂರಿದ್ದಾರೆ.

            'ಇವರು ವಯನಾಡಿನಲ್ಲಿ ಮೈತ್ರಿ ಧರ್ಮದ ಬಗ್ಗೆ ಮಾತನಾಡುತ್ತಾರೆ' ಎಂದು ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

               ಲೋಕಸಭೆಯಲ್ಲಿ 15 ವರ್ಷಗಳಿಂದ ತಿರುವನಂತಪುರವನ್ನು ಪ್ರತಿನಿಧಿಸುತ್ತಿರುವ ತರೂರ್‌, ನಾಲ್ಕನೇ ಅವಧಿಯ ಮೇಲೆ ದೃಷ್ಟಿಯಿಟ್ಟಿದ್ದಾರೆ. ಅವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸ್ಪರ್ಧಿಸಲಿದ್ದಾರೆ. ಅಲ್ಲದೆ ಈ ಕ್ಷೇತ್ರದಿಂದ ಸಿಪಿಐ, ಪನ್ನಿಯನ್‌ ರವೀಂದ್ರನ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

          ಕಳೆದ ವಾರ ಮಾತನಾಡಿದ್ದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು, 'ಎಡ ಪ್ರಜಾಸತ್ತಾತ್ಮಕ ರಂಗದ ಆಡಳಿತವಿರುವ ಕೇರಳದಿಂದ ರಾಹುಲ್‌ ಗಾಂಧಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ದೇಶಕ್ಕೆ ಯಾವ ಸಂದೇಶ ಕಳುಹಿಸಲು ಪ್ರಯತ್ನಿಸುತ್ತಿದೆ' ಎಂದು ಪ್ರಶ್ನಿಸಿದ್ದರು.

           'ರಾಹುಲ್‌ ಅವರು ದಕ್ಷಿಣ ಭಾರತದಿಂದಲೇ ಸ್ಪರ್ಧಿಸಲು ಬಯಸಿದ್ದರೆ, ನೇರವಾಗಿ ಬಿಜೆಪಿ ವಿರುದ್ಧ ಹೋರಾಡಲು ಕರ್ನಾಟಕ ಅಥವಾ ತೆಲಂಗಾಣದ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಅದಾಗ್ಯೂ ಇದು ಸಾರ್ವಜನಿಕರ ಅಭಿಪ್ರಾಯವೇ ಹೊರತು ನನ್ನ ಪಕ್ಷದ್ದಲ್ಲ' ಎಂದು ಅವರು ಪ್ರತಿಕ್ರಿಯಿಸಿದ್ದರು.

             ರಾಜಾ ಅವರ ಪತ್ನಿ ಅನ್ನಿ ರಾಜಾ ಅವರನ್ನು ಸಿಪಿಐ ವಯನಾಡಿನ ಅಭ್ಯರ್ಥಿಯಾಗಿ ಘೋಷಿಸಿದೆ.

             ಕಾಂಗ್ರೆಸ್‌ ಮತ್ತು ಸಿಪಿಐ ಪಕ್ಷಗಳು 'ಇಂಡಿಯಾ' ಕೂಟದ ಭಾಗವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿವೆ. ಆದರೆ ಕೇರಳದಲ್ಲಿ ಈ ಪಕ್ಷಗಳು ಪರಸ್ಪರರ ವಿರುದ್ಧ ಸ್ಪರ್ಧಿಸುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries