ಇಂದಿನ ದಿನಗಳಲ್ಲಿ ಹಣ ಸಂಪಾದನೆಗಿಂತ ಸಂಪಾದನೆ ಮಾಡಿರುವ ಹಣವನ್ನು ಸುರಕ್ಷಿತವಾಗಿಡುವುದು ಚಿಂತಾಜನಕದ ವಿಷಯವಾಗಲು ಕಾರಣವೆ ಈ ಸೈಬರ್ ಕ್ರೈಂ. ಭಾರತ ಸರ್ಕಾರ ಡಿಜಿಟಲ್ ದುನಿಯಾದಲ್ಲಿ ನಡೆಯುತ್ತಿರುವ ಸೈಬರ್ ಫ್ರಾಡ್ (Cyber Frauds) ತಡೆಯಲು ಸಾಕಷ್ಟು ಸಾಹಸಗಳನ್ನು ಮಾಡುತ್ತಿದೆ. ಭಾರತದಲ್ಲಿ https://sancharsaathi.gov.in/ ಎಂಬ ಸೈಬರ್ ಕ್ರಿಮಿನಲ್ ಘಟಕವನ್ನು ತಯಾರಿಸಿದೆ. ಇದು ಸಮಾಜದಲ್ಲಿ ನಡೆಯುತ್ತಿರುವ ಹೊಸ ಮಾದರಿಯ ಮೋಸ, ವಂಚನೆಗಳಿಗೆ ಅನುಗುಣವಾಗಿ ಈಗಾಗಲೇ Chakshu, CEIR, TAFCOP, KYM, RICWIN ಮತ್ತು KYI ಎಂಬ ಹೊಸ ಆರು ಸೇವೆಗಳನ್ನು ಆರಂಭಿಸಿದೆ.
ಮೋದಿ ಸರ್ಕಾರದ ಈ ಸೌಲಭ್ಯಗಳೂ ಹೆಚ್ಚು ಉಪಯುಕ್ತವಾಗಿವೆ
ಇದು ಹಲವಾರು ವರ್ಷಗಳಿಂದ ವಿಪರೀತವಾಗಿ ನಡೆಯುತ್ತಿರುವ ಸಿಮ್ ಸ್ವಾಪ್ ಮತ್ತು ಸ್ಕ್ಯಾಮ್ ಕರೆಗಳಂತಹ ಸೈಬರ್ ಫ್ರಾಡ್ (Cyber Frauds) ವಂಚನೆಗಳಿಗೆ ಬ್ರೇಕ್ ಹಾಕಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದನ್ನು ಮೀರಿ ಹೊಸ ಮಾರ್ಗಗಳನ್ನು ಅನುಸರಿಸಿ ಮುಗ್ದರ ಖಾತೆಯನ್ನು ಖಾಲಿ ಮಾಡುತ್ತಿರುವ ಆನ್ಲೈನ್ ಸೈಬರ್ ವಂಚಕರಿಗೆ ಈ ಮೇಲಿನ ಸೇವೆಗಳು ಯಮಪಾಶವಾಗಲಿದೆ. ಅಂದ್ರೆ ಒಂದು ವೇಳೆ ಯಾರೇ ಆಗಿರಲಿ ಸಾಮಾನ್ಯ ಕರೆಗಳು, SMS ಅಥವಾ ಸೋಶಿಯಲ್ ಮೀಡಿಯಾದಲ್ಲಿ ವಂಚನೆಗಳಿಗೆ ಬಲಿಯಾಗಿದ್ದಾರೆ ಈ ಮೇಲಿನ ಹೊಸ Chakshu, CEIR, TAFCOP, KYM, RICWIN ಮತ್ತು KYI ಆರು ಸೇವೆಗಳನ್ನು ಅನುಸರಿಸಿ ದೂರು ನೀಡಬಹುದು.
ಭಾರತ ಸರ್ಕಾರ Cyber Frauds ತಡೆಯಲು ಮಾಡುತ್ತಿರುವ ಕೆಲಸವೇನು?
ಈಗಾಗಲೇ ಮೇಲೆ ತಿಳಿಸಿರುವಂತೆ ಚಕ್ಷು (Chakshu) ಸೇವೆಗಳು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ತಮ್ಮೊಂದಿಗೆ ಕರೆ, SMS ಮತ್ತು ಸೋಶಿಯಲ್ ಮೀಡಿಯಾ ಅನುಗುಣವಾಗಿ ನಡೆದ ಮೋಸ, ವಂಚನೆಗಳನ್ನು ವರದಿ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಸೋಶಿಯಲ್ ಮೀಡಿಯಾದ ವೇದಿಕೆಗಳಲ್ಲಿ ನೀವು ಸ್ವೀಕರಿಸುವ ಯಾವುದೇ ರೀತಿಯ ಕರೆಗಳು, SMS ಮತ್ತು ಮೆಸೇಜ್ ಅನ್ನು ಮರು ಪರಿಶೀಲನೆ ಮಾಡುತ್ತದೆ. ಅಲ್ಲಿ ಯಾವುದೇ ರೀತಿಯ ವಂಚನೆ ಅಥವಾ ದುರುದ್ದೇಶಗಳಿಗೆ ಸಂಭದಿಸಿದರೆ ಅದನ್ನು ತಕ್ಷಣ ಕಡಿತಗೊಳಿಸಲಾಗುತ್ತದೆ. ಅಲ್ಲದೆ ಇಂತಹ ವಂಚನೆಯಿಂದ ರಕ್ಷಣೆಯನ್ನು ಸುಧಾರಿಸಲು ಟ್ರೂಕಾಲರ್‌ನಂತಹ ಖಾಸಗಿ ಕಂಪನಿಗಳೊಂದಿಗೆ ಸಹಕರಿಸಲು ಸರ್ಕಾರ ಕೆಲಸ ಮಾಡುತ್ತಿದೆಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿಕೆ ನೀಡಿದ್ದಾರೆ.
ಚಕ್ಷು (Chakshu) ಪೋರ್ಟಲ್ ಬಳಸುವುದು ಹೇಗೆ?
➥ಮೊದಲಿಗೆ ನೀವು https://sancharsaathi.gov.in/ ವೆಬ್ಸೈಟ್ ತೆರೆದು ಕೆಳಗೆ Report Suspected Fraud Communication (Chakshu) ಟ್ಯಾಬ್ ಅನ್ನು ಕ್ಲಿಕ್ ಮಾಡಿ ತೆರೆಯಿರಿ.
➥ನಂತರ ಇದರ ಬಳಕೆಯ ನಿಯಮಗಳು ಮತ್ತು ಹಕ್ಕು ನಿರಾಕರಣೆಗಳನ್ನು ಪರಿಶೀಲಿಸಿ ವರದಿ ಮಾಡಲು ಮುಂದುವರಿಸಿ (Continue for reporting) ಮೇಲೆ ಕ್ಲಿಕ್ ಮಾಡಿ.
➥ಇದರ ನಂತರ ನೀವು ನೀಡಲಿರುವ ದೂರು ನಿಮಗೆ ಬಂದ Call, SMS ಅಥವಾ WhatsApp ಎಂಬ ಮೂರು ಮಾಧ್ಯಮಗಳಲ್ಲಿ ಒಂದನ್ನು ಆಯ್ಕೆ ಮಾಡಿ.
➥ಈಗ ಶಂಕಿತ ವಂಚನೆಯ ಕ್ಷೇತ್ರಗಳ ವರ್ಗಗಳಲ್ಲಿ ಒಂದನ್ನು ಕಡ್ಡಾಯವಾಗಿ ಮತ್ತು ಸರಿಯಾಗಿ ಆಯ್ಕೆ ಮಾಡಿ ಮುಂದೆ ಸಾಗಿ.
➥ಇದರ ನಂತರ ಕೆಳಗೆ ಈ ಶಂಕಿತ ವಂಚನೆ ಸಂವಹನದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ ಇದನ್ನು ನಿಮ್ಮ ಫೋನ್ ನೋಡಿ ಪಡೆಯಬಹುದು.
➥ನಂತರ ಇದರ ಕೆಳಗೆ ದೂರಿನ ವಿವರಗಳನ್ನು ಪ್ರತಿ ನಿಮಗೆ ನಮೂದಿಸಿ (500 ಅಕ್ಷರಗಳು)
➥ಇದರ ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ನಿಮ್ಮ ಹೆಸರನ್ನು ನೀಡಬೇಕುತ್ತದೆ.
➥ನಂತರ ನಿಮಗೆ ಯಾವ ನಂಬರ್ನಿಂದ ಕರೆ, ಮೆಸೇಜ್ ಅಥವಾ ವಾಟ್ಸಾಪ್ ಬಂತೋ ಆ ಸಂಖ್ಯೆಯನ್ನು ಇಲ್ಲಿ ನೀಡಬೇಕಾಗುತ್ತದೆ.
➥ಕೊನೆಯದಾಗಿ ಈ ದೂರನ್ನು ಗಂಭೀರವಾಗಿ ಪರಿಗಣಿಸಲು ಕ್ಯಾಪ್ಚಾ ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು OTP ಮೂಲಕ ವೆರಿಫಿಕೇಷನ್ ಮಾಡಬೇಕಾಗುತ್ತದೆ.
➥ದೂರು ನೋಂದಾಯಿಸಿಕೊಂಡ ನಂತರ ನಿಮಗೆ ನಿಮ್ಮ ದೂರಿನ ಸಂಖ್ಯೆಯನ್ನು SMS ಮೂಲಕ ಕಳುಹಿಸಲಾಗುತ್ತದೆ ಅಷ್ಟೇ.