HEALTH TIPS

ಅಬಕಾರಿ ನೀತಿ ಪ್ರಕರಣ: ED ಸಮನ್ಸ್ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ಬಂದ ಸಚಿವ

               ವದೆಹಲಿ: ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹಲೋತ್‌ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಬಂದಿದ್ದಾರೆ.

                ದೆಹಲಿ ಸರ್ಕಾರವು 'ಅಬಕಾರಿ ನೀತಿ' ಜಾರಿಗೆ ತಂದಿದ್ದ ಸಂದರ್ಭ ಹಣ ಅಕ್ರಮ ವರ್ಗಾವಣೆ ನಡೆದಿದೆ ಎನ್ನಲಾಗಿದೆ.

                 ಈ ಸಂಬಂಧ ವಿಚಾರಣೆಗೆ ಬರುವಂತೆ ಸಮನ್ಸ್‌ ನೀಡಿದ ಬೆನ್ನಲ್ಲೇ, ಗೆಹಲೋತ್‌ ಅವರು ಇ.ಡಿ ಕಚೇರಿ ತಲುಪಿದ್ದಾರೆ.

                ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು, ಇದೇ ಪ್ರಕರಣ ಸಂಬಂಧ ಇ.ಡಿ ಫೆಬ್ರುವರಿ 21ರಂದು ಬಂಧಿಸಿದೆ. ವಿಚಾರಣೆಗೆ ಹಾಜರಾಗುವಂತೆ ಕಳುಹಿಸಿದ್ದ ಸಮನ್ಸ್‌ಗಳನ್ನು ಕೇಜ್ರಿವಾಲ್‌ ಪದೇ ಪದೇ ನಿರ್ಲಕ್ಷಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries