ತಿರುವನಂತಪುರ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗೂ ಬದಲಾವಣೆ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಪಟ್ಟಿಗೆ ಹೆಸರು ಸೇರಿಸಲು ಮಾರ್ಚ್ 25ರವರೆಗೆ ಅವಕಾಶವಿದೆ ಎಂಬ ಅಧಿಕೃತ ಸೂಚನೆಗಳೂ ಹೊರಬಿದ್ದಿತ್ತು. ಆದರೆ ಇಂದಿನ ಹೊತ್ತಿಗೆ ಏಪ್ರಿಲ್ 4ರವರೆಗೆ ಹೆಸರು ಸೇರಿಸಬಹುದು ಎಂಬ ಸಂದೇಶ ವ್ಯಾಪಕವಾಗಿ ಹಬ್ಬಿದೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಏನು ಹರಡಿತು?:
‘ಏಪ್ರಿಲ್ 4ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು’ ಎಂಬ ಶೀರ್ಷಿಕೆಯಡಿ ಪತ್ರಿಕೆಯ ಲೇಖನವನ್ನೊಳಗೊಂಡ ಸುದ್ದಿ ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 4ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಅದು ಸುದ್ದಿಯ ವಿಷಯವಾಗಿತ್ತು. ಇದನ್ನು ಫೇಸ್‍ಬುಕ್ ಮತ್ತು ವಾಟ್ಸಾಪ್‍ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ನೈಜತೆ ಕಂಡುಕೊಳ್ಳಲಿರುವ ದಾರಿ:
ಕೇರಳ ಸರ್ಕಾರದ ಅಧಿಕೃತ ಸುದ್ದಿ ಪೋರ್ಟಲ್ ಪಿ.ಆರ್.ಡಿ. ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳ ಪುಟಗಳಲ್ಲಿ ಮಾಡಿದ ಪ್ರಕಟಣೆಗಳಲ್ಲಿ ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ಲಭ್ಯವಿದೆ.
ಮುಖ್ಯ ಚುನಾವಣಾಧಿಕಾರಿಗಳಿಂದ ನಿರಾಕರಣೆ:
ಮಾರ್ಚ್ 25ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನದ ಅವಕಾಶ ಸಿಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ. ಆ.4ರವರೆಗೆ ನಡೆಯಲಿರುವ ಅವರ ಅರ್ಜಿಗಳ ಅಧಿಕೃತ ಹಂತದ ಪರಿಶೀಲನೆ ಬಳಿಕ ಅರ್ಹರನ್ನು ಸೇರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು ಎಂದಿರುವರು.
ಏಪ್ರಿಲ್ 4ರವರೆಗೆ ಅರ್ಜಿ ಸಲ್ಲಿಸಿದವರಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿದೆ ಎಂಬ ಪ್ರಚಾರ ನಡೆಯುತ್ತಿರುವಾಗಲೇ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಯಾಗಿದೆ. ಚುನಾವಣಾ ಆಯೋಗವು ಅನುಮೋದಿಸಿದ ಗುರುತಿನ ಚೀಟಿಗಳನ್ನು ಬಳಸಿ ತಮ್ಮ ಮತಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನು ಪಿಆರ್‍ಡಿ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಲಾಗಿದೆ.
ಸುದ್ದಿಯನ್ನು ತಳ್ಳಿ ಹಾಕಿದ ಜಿಲ್ಲಾ ಚುನಾವಣಾಧಿಕಾರಿಗಳು:
ಪತ್ರಿಕೆಯ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಅಧಿಕೃತ ಫೇಸ್‍ಬುಕ್ ಪುಟದ ಮೂಲಕ ಸುದ್ದಿಯನ್ನು ನಿರಾಕರಿಸಲು ಮುಂದಾದರು. 2024ರ ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್ 4ರವರೆಗೆ ಅರ್ಜಿ ಸಲ್ಲಿಸಬಹುದು ಎಂಬುದು ಸುಳ್ಳು ಸುದ್ದಿ. ಮಾರ್ಚ್ 25ರವರೆಗೆ ಮಾತ್ರ ಹೆಸರು ಸೇರಿಸಲು ಅವಕಾಶವಿತ್ತು. ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದಿರಿ.' ಎಂದು ತಿರುವನಂತಪುರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಎರ್ನಾಕುಲಂ ಕಲೆಕ್ಟರ್ ಕೂಡ ನಕಲಿ ಸುದ್ದಿಗಳ ಬಗ್ಗೆ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಏಪ್ರಿಲ್ 4ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂಬ ಸುದ್ದಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಮಾರ್ಚ್ 25 ರಂದು ಹೆಸರುಗಳನ್ನು ಸೇರಿಸುವ ಗಡುವು ಕೊನೆಗೊಂಡಿದೆ.