ಗುರುಗ್ರಾಮ: ರೆಸ್ಟೋರೆಂಟ್‌ವೊಂದರಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಬಳಸಿದ ಐವರು ಅಸ್ವಸ್ಥಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮನಲ್ಲಿ ನಡೆದಿದೆ.
ಐವರಲ್ಲಿ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಶನಿವಾರ ರಾತ್ರಿ ಊಟಕ್ಕೆ ಪತ್ನಿ ಹಾಗೂ ನಾಲ್ವರು ಸ್ನೇಹಿತರೊಂದಿಗೆ ಅಂಕಿತ್ (ನೋಯ್ಡಾ ನಿವಾಸಿ) ಗುರುಗ್ರಾಮದ ಸೆಕ್ಟರ್90ರ ರೆಸ್ಟೋರೆಂಟ್‌ಗೆ ತೆರಳಿದ್ದರು.
ಮೌತ್ ಫ್ರೆಶ್ನರ್ ಬಳಸಿದ ಬಳಿಕ ಐವರೂ ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿದ್ದರು. ಹಾಗೂ ರಕ್ತ ಸಹಿತ ವಾಂತಿಯಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.
ಮೌತ್ ಫ್ರೆಶ್ನರ್ ಪ್ಯಾಕೆಟ್ ಅನ್ನು ವೈದ್ಯರಿಗೆ ತೋರಿಸಿದಾಗ ಡ್ರೈ ಐಸ್ ( ಕಾರ್ಬನ್ ಡೈ ಆಕ್ಸೈಡ್) ಎಂದು ಹೇಳಿದರು ಹಾಗೂ ಇದು ಸಾವಿಗೆ ಕಾರಣವಾಗಬಹುದೆಂದೂ ತಿಳಿಸಿದ್ದರು ಎಂದು ಅಂಕಿತ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.