ನವದೆಹಲಿ :ನಾಗರಿಕರ ಯೋಗಕ್ಷೇಮ ಹಾಗೂ ಜೀವನದ ಗುಣಮಟ್ಟದ ಜಾಗತಿಕ ವಿಶ್ವಸಂಸ್ಥೆಯ ಸೂಚ್ಯಾಂಕದಲ್ಲಿ ಭಾರತ ತನ್ನ ಸ್ಥಾನವನ್ನು ಉತ್ತಮಗೊಳಿಸಿಕೊಂಡಿದೆ.
ನವದೆಹಲಿ :ನಾಗರಿಕರ ಯೋಗಕ್ಷೇಮ ಹಾಗೂ ಜೀವನದ ಗುಣಮಟ್ಟದ ಜಾಗತಿಕ ವಿಶ್ವಸಂಸ್ಥೆಯ ಸೂಚ್ಯಾಂಕದಲ್ಲಿ ಭಾರತ ತನ್ನ ಸ್ಥಾನವನ್ನು ಉತ್ತಮಗೊಳಿಸಿಕೊಂಡಿದೆ.
ಈ ಸೂಚ್ಯಂಕದಲ್ಲಿ 2020 ಹಾಗೂ 2021ರಲ್ಲಿ ಕೆಳಕ್ಕೆ ಜಾರಿದ್ದ ಭಾರತ ಮೊದಲ ಬಾರಿಗೆ ತನ್ನ ಸ್ಥಾನವನ್ನು ಉತ್ತಮಗೊಳಿಸಿಕೊಂಡಿದೆ ಎಂದು ಈಗಷ್ಟೇ ಬಿಡುಗಡೆಯಾಗಿರುವ ''ಬ್ರೇಕಿಂಗ್ ದಿ ಗ್ರಿಡ್ಲಾಕ್: ರಿಇಮೇಜಿಂಗ್ ಕೋಆಪರೇಷನ್ ಇನ್ ಎ ಪೋಲರೈಸ್ಡ್ ವರ್ಲ್ಡ್'' ಶೀರ್ಷಿಕೆಯ 2023/24 ಮಾನವ ಅಭಿವೃದ್ಧಿ ವರದಿ ಹೇಳಿದೆ.
ವಿಶ್ವದ ಅತಿ ದೊಡ್ಡ 5ನೇ ಆರ್ಥಿಕತೆಯಾಗಿರುವ ಭಾರತ 193 ದೇಶಗಳಲ್ಲಿ 134ನೇ ಸ್ಥಾನವನ್ನು ಪಡೆದುಕೊಂಡಿದೆ. 2022ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಾಂಕ (HDI)ದ ಮೌಲ್ಯ 0.633ರಿಂದ 0.644ಕ್ಕೆ ಏರಿಕೆಯಾಗಿದೆ.
ಈ ಸೂಚ್ಯಂಕದಲ್ಲಿ ಭಾರತ 2022ರಲ್ಲಿ ತನ್ನ ಸ್ಥಾನವನ್ನು ಉತ್ತಮಗೊಳಿಸಿಕೊಂಡಿದ್ದರೂ ಬಾಂಗ್ಲಾದೇಶ (129), ಭೂತಾನ್ (125), ಶ್ರೀಲಂಕಾ (78) ಹಾಗೂ ಚೀನಾ (75)ದಂತಹ ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳಿಗಿಂತ ಹಿಂದುಳಿದಿದೆ ಎಂದು ವರದಿ ಹೇಳಿದೆ.