ವಾಟ್ಸಾಪ್‍ನಲ್ಲಿನ ಚಾಟ್‍ನಿಂದ ಬಹಳ ಹಿಂದಿನ ಸಂದೇಶವನ್ನು ಕಂಡುಹಿಡಿಯುವುದು ತುಂಬಾ ಕಷ್ಟ.
ಇದೀಗ ಮೆಟಾ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸಂದೇಶವನ್ನು ಹುಡುಕಲು ದಿನಾಂಕವನ್ನು ನಮೂದಿಸಿದರೆ ಸಾಕು. ಈ ನವೀಕರಣವು ಪ್ರಸ್ತುತ Android ಮತ್ತು iOS ಬಳಕೆದಾರರಿಗೆ ಲಭ್ಯವಿದೆ.
ವರ್ಷಗಟ್ಟಲೆ ಒಂದೇ ಪೋನಿನಲ್ಲಿ ವಾಟ್ಸಾಪ್ ಬಳಸುತ್ತಿರುವವರಿಗೆ ಹಳೆಯ ಚಾಟ್ ಗಳು ಸಿಗುವುದು ಕಷ್ಟ. ಹಿಂದಿನ ಚಾಟ್ ಸಂದೇಶದಲ್ಲಿನ ಯಾವುದೇ ಪದವನ್ನು ಬಳಸಿಕೊಂಡು ಚಾಟ್ ಅನ್ನು ಹುಡುಕಬಹುದು. ಇದನ್ನು ದಿನಾಂಕವನ್ನು ಬಳಸಿಕೊಂಡು ಸಹ ಕಂಡುಹಿಡಿಯಬಹುದು.
ಚಾಟ್ ಹುಡುಕಲು ಖಾತೆ ಅಥವಾ ಗುಂಪನ್ನು ತೆರೆಯಿರಿ. ನಂತರ ಹೆಸರಿನ ಮೇಲೆ ಕ್ಲಿಕ್ ಮಾಡಿ. ಹುಡುಕಾಟ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲಿನ ಬಲಭಾಗದಲ್ಲಿ ಕ್ಯಾಲೆಂಡರ್ ಐಕಾನ್ ಅನ್ನು ನೀವು ನೋಡುತ್ತೀರಿ. ಇದನ್ನು ಆಯ್ಕೆ ಮಾಡಿ ಮತ್ತು ಈ ದಿನದ ಸಂದೇಶವನ್ನು ವೀಕ್ಷಿಸಲು ದಿನಾಂಕವನ್ನು ನಮೂದಿಸಿ. ಈಗ ನಿಮಗೆ ಅಗತ್ಯವಿರುವ ಹಳೆಯ ಚ್ಯಾಟ್ ಗಳು ಲಭ್ಯವಾಗುತ್ತದೆ.