ನವದೆಹಲಿ: ಗಂಗಾ ಮತ್ತು ಯಮುನಾ ನದಿಗಳಿಗೆ ಪೂಜೆ ಸಲ್ಲಿಸುವ ಕುರಿತು ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ( UPPCB) ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಸೂಚನೆ ನೀಡಿದೆ.

ಎರಡು ನದಿಗಳ ಘಾಟ್‌ಗಳಲ್ಲಿ ಪಾಲಿಥಿನ್ ಕವರ್‌ಗಳಲ್ಲಿ ಪೂಜೆಗೆ ಅರ್ಪಿಸಿದ ಹೂವುಗಳು ಮತ್ತು ಹೂಮಾಲೆಗಳನ್ನು ಎಸೆದ ಕಾರಣದಿಂದ ಎರಡು ನದಿಗಳಲ್ಲಿ ಮಾಲಿನ್ಯದ ಕುರಿತು ಪತ್ರಿಕೆಯ ವರದಿಯನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ನ್ಯಾಯಮಂಡಳಿಯು ವಿಚಾರಣೆ ನಡೆಸಿತು .
ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು ಡಿಪಿಸಿಸಿ ಪರ ವಕೀಲರು ಈ ವಿಷಯದ ಬಗ್ಗೆ ಸಮಿತಿಯ ಪ್ರತಿಕ್ರಿಯೆಯನ್ನು ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದರು.
ನಾಲ್ಕು ವಾರಗಳಲ್ಲಿ ಹೊಸದಾಗಿ ಪ್ರತಿಕ್ರಿಯೆ ನೀಡುವಂತೆ ಪೀಠ ಸೂಚಿಸಿದೆ. ನ್ಯಾಯಾಂಗ ಸದಸ್ಯ ಸುಧೀರ್ ಅಗರವಾಲ್ ಹಾಗೂ ತಜ್ಞ ಸದಸ್ಯ ಸೆಂಥಿಲ್ ಅವರು ಕೂಡ ಈ ಪೀಠದ ಭಾಗವಾಗಿದ್ದಾರೆ.
ಮುಂದಿನ ವಿಚಾರಣೆಯನ್ನು ನ್ಯಾಯಮಂಡಳಿ ಜುಲೈ 3ಕ್ಕೆ ಮುಂದೂಡಿತು.