ನವದೆಹಲಿ: ಟೆಕ್ ದೈತ್ಯ ಸಂಸ್ಥೆ HP ಭಾರತದಲ್ಲಿ SMB (small and medium-sized business)ಗಳ ಮುದ್ರಣ ಅಗತ್ಯಗಳನ್ನು ಪೂರೈಸಲು ಹೊಸ ಶ್ರೇಣಿಯ 'OfficeJet Pro' ಪ್ರಿಂಟರ್‌ಗಳನ್ನು ಗುರುವಾರ ಪರಿಚಯಿಸಿದೆ.
ಇವು ಅತ್ಯಂತ ವಿಶ್ವಾಸಾರ್ಹ, ಅನುಕೂಲಕರ ಮತ್ತು ಸುಸ್ಥಿರ ಮುದ್ರಣ ಸಾಧನವಾಗಿದ್ದು, ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ವ್ಯಾಪಾರ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ.
ಪ್ರಯೋಜನಗಳು:
ದೊಡ್ಡ ಟಚ್ ಸ್ಕ್ರೀನ್‌ಗಳು ಮತ್ತು ಆಧುನಿಕ ಇಂಟರ್‌ಫೇಸ್‌ನೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತವೆ.
A3 ಗಾತ್ರದವರೆಗೆ ಅಸಾಧಾರಣ ಮುದ್ರಣ ಸಾಮರ್ಥ್ಯಗಳನ್ನು ಹೊಂದಿವೆ.
ಶೇ 45ರಷ್ಟು ಮರುಬಳಕೆಯ ಪ್ಲಾಸ್ಟಿಕ್‌ನಿಂದಾಗಿ ಇದು ಪರಿಸರ ಸ್ನೇಹಿಯೂ ಆಗಿದೆ.
ಗ್ರಾಹಕರ ಮುದ್ರಣ ಅಗತ್ಯಗಳಿಗೆ ಅನುಗುಣವಾಗಿ ಶುದ್ಧ ಇಂಕ್ ಹೊಂದಿರುವ ಕಾರ್ಟ್‌ರಿಡ್ಜ್‌ಗಳ ಮೂಲಕ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ, ಭದ್ರತೆಗೂ ಆದ್ಯತೆ ನೀಡಲಾಗಿದೆ.
ಸುಸ್ಥಿರ ಭವಿಷ್ಯದ ದೃಷ್ಟಿಕೋನದಿಂದಾಗಿ ಮರುಬಳಕೆಗೂ ಅವಕಾಶ ಕಲ್ಪಿಸಲಾಗಿದೆ.
'ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು(SMB) ವೇಗವಾಗಿ ಬೆಳೆಯುತ್ತಿದೆ. HP ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ತಮ್ಮ ವಿಶಿಷ್ಟ ಸವಾಲುಗಳನ್ನು ಎದುರಿಸಲು ಬದ್ಧವಾಗಿದೆ. OfficeJet Pro ಸರಣಿಯು A3 ಮುದ್ರಣ ಸಾಮರ್ಥ್ಯ, ದೊಡ್ಡ ಟಚ್ ಸ್ಕ್ರೀನ್‌ಗಳು, ಸಂಯೋಜಿತ ಭದ್ರತೆ ಮತ್ತು ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಭಾರತದಲ್ಲಿ SMBಗಳ ವಿವಿಧ ಅಗತ್ಯಗಳನ್ನು ಪೂರೈಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ' ಎನ್ನುತ್ತಾರೆ HP ಇಂಡಿಯಾದ ಪ್ರಿಂಟಿಂಗ್ ಸಿಸ್ಟಮ್ಸ್‌ನ ಹಿರಿಯ ನಿರ್ದೇಶಕ ಸುನೀಶ್ ರಾಘವನ್.
OfficeJet Pro ಶ್ರೇಣಿ ಸಾಧನಗಳ ಬೆಲೆ ಮತ್ತು ಲಭ್ಯತೆ
HP OfficeJet Pro 9720: ₹ 25,385
HP OfficeJet Pro 9730: ₹ 38,125
HP OfficeJet Pro 9130: ₹ 45,906
HP OfficeJet Pro 8120: ₹ 21,562