ನವದೆಹಲಿ: ಬಿಜೆಪಿಯು ಶಾಸಕರ ಖರೀದಿಯಲ್ಲಿ ತೊಡಗಿದ್ದು, ನಮ್ಮ ಪಕ್ಷದ ಹತ್ತು ಮಂದಿ ಶಾಸಕರಿಗೆ ತಲಾ ₹25 ಕೋಟಿಯ ಆಮಿಷ ಒಡ್ಡುವ ಮೂಲಕ ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ರಿತುರಾಜ್ ಝಾ ಆರೋಪಿಸಿದ್ದಾರೆ.
ನವದೆಹಲಿ: ಬಿಜೆಪಿಯು ಶಾಸಕರ ಖರೀದಿಯಲ್ಲಿ ತೊಡಗಿದ್ದು, ನಮ್ಮ ಪಕ್ಷದ ಹತ್ತು ಮಂದಿ ಶಾಸಕರಿಗೆ ತಲಾ ₹25 ಕೋಟಿಯ ಆಮಿಷ ಒಡ್ಡುವ ಮೂಲಕ ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ರಿತುರಾಜ್ ಝಾ ಆರೋಪಿಸಿದ್ದಾರೆ.
ದೆಹಲಿಯ ವಿಧಾನಸಭೆಯಲ್ಲಿ ಇಂದು (ಸೋಮವಾರ) ಮಾತನಾಡಿದ ಅವರು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ 'ಇಂಡಿಯಾ' ಮೈತ್ರಿಕೂಟ ಆಯೋಜಿಸಿದ್ದ 'ಲೋಕತಂತ್ರ ಉಳಿಸಿ' ರ್‍ಯಾಲಿಯಲ್ಲಿ ಭಾಗವಹಿಸಿದ್ದೆ.
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, 'ಬಿಜೆಪಿಯು ದೆಹಲಿ ಸರ್ಕಾರವನ್ನು ನಾಶಗೊಳಿಸಲು ಬಯಸಿದೆ. 2013, 2015, 2020ರ ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ 2022ರ ದೆಹಲಿ ಪಾಲಿಕೆ ಚುನಾವಣೆಯಲ್ಲಿ 4 ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದ ಏಕೈಕ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಇದೀಗ ಮೋದಿ ಮತ್ತೊಮ್ಮೆ ಕೀಳು ಮಟ್ಟದ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ' ಎಂದರು.
'ಬಿಜೆಪಿ ಸೇರುವ ಪ್ರಸ್ತಾಪದೊಂದಿಗೆ ಭಾನುವಾರ ನನ್ನನ್ನು ಸಂಪರ್ಕಿಸಲಾಯಿತು. ಕಳೆದ ನಾಲ್ಕು ದಿನಗಳಿಂದ ನನ್ನನ್ನು ಪ್ರಯತ್ನಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಭಾನುವಾರ ರಾತ್ರಿ 9.15ಕ್ಕೆ ನಾನು ಅವರನ್ನು ಭೇಟಿಯಾದೆ. ಅಲ್ಲಿ ಮೂರ್ನಾಲ್ಕು ಜನರು ಒಂದೆಡೆ ಕರೆದುಕೊಂಡು ಹೋಗಿ, 'ನೋಡಿ ಒಪ್ಪದೇ ಹೋದರೆ ನಿಮಗೇನೂ ಸಿಗಲಾರದು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. 10 ಶಾಸಕರನ್ನು ಕರೆತನ್ನಿ. ಪ್ರತಿಯೊಬ್ಬರಿಗೂ ₹25 ಕೋಟಿ ನೀಡುತ್ತೇವೆ. ಬಿಜೆಪಿ ಸರ್ಕಾರದಲ್ಲಿ ನಿಮ್ಮನ್ನು ಮಂತ್ರಿ ಮಾಡುತ್ತೇವೆ' ಎಂದು ಆಮಿಷ ಒಡ್ಡಿದರು. ಎಎಪಿ ಶಾಸಕರು ಪಕ್ಷವನ್ನು ಬಿಡುವುದಿಲ್ಲ. ಹೀಗಾಗಿ ಬಿಜೆಪಿ ಮತ್ತೆ 'ಆಪರೇಷನ್ ಕಮಲ' ಆರಂಭಿಸಿದೆ' ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ, 'ಬಿಜೆಪಿ ಸೇರಲು ನಿಮಗೆ ಕರೆ ಬಂದ ಬಳಿಕ ನೀವು ಪೊಲೀಸರಿಗೆ ದೂರು ನೀಡಿದ್ದೀರಾ' ಎಂದು ಪ್ರಶ್ನಿಸಿದರು. 'ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಈ ಮೊದಲು ಎಎಪಿ ಶಾಸಕರು ಹತ್ತಾರು ಬಾರಿ ಆರೋಪಿಸಿದ್ದಾರೆ. ನೀವು ಎಷ್ಟು ದಿನ ಸುಳ್ಳು ಹೇಳುತ್ತೀರಿ' ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.