HEALTH TIPS

ಜೆಇಇ ಮೇನ್‌: 100 ಅಂಕ ಗಳಿಸಿದ 56 ಅಭ್ಯರ್ಥಿಗಳು

          ವದೆಹಲಿ: ಜೆಇಇ ಮೇನ್‌ ಫಲಿತಾಂಶ ಪ್ರಕಟವಾಗಿದ್ದು, 56 ಅಭ್ಯರ್ಥಿಗಳು ಪರಿಪೂರ್ಣ 100 ಅಂಕ ಗಳಿಸಿದ್ದಾರೆ. ಈ ಸಾಧನೆ ಮಾಡಿದವರ ಪೈಕಿ ಹೆಚ್ಚಿನ ಅಭ್ಯರ್ಥಿಗಳು ತೆಲಂಗಾಣದವರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.

            ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದಕ್ಕಾಗಿ 39 ಅಭ್ಯರ್ಥಿಗಳು ಮುಂದಿನ ಮೂರು ವರ್ಷ ಕಾಲ ಜೆಇಇ-ಮೇನ್‌ ಪರೀಕ್ಷೆ ತೆಗೆದುಕೊಳ್ಳದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.

             ಪರಿಪೂರ್ಣ '100 ಅಂಕ' ಗಳಿಸಿದವರಲ್ಲಿ 15 ಜನರು ತೆಲಂಗಾಣದವರಿದ್ದರೆ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 7 ಹಾಗೂ ದೆಹಲಿಯ 6 ಅಭ್ಯರ್ಥಿಗಳು ಇದ್ದಾರೆ.

               ಜೆಇಇ-ಮೇನ್‌ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗಿತ್ತು. ವಿದೇಶಗಳಲ್ಲಿ ಸಹ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries