ಹೆಣ್ಣಿನ ಕಣ್ಣಿಗೆ ಕಾಡಿಗೆ ಹಚ್ಚಿದರೆ ಅವಳ ಅಂದ ಹೆಚ್ಚುವುದು. ಈ ಕಾಜಲ್, ಐಲೈನರ್ , ಕಣ್ಕಪ್ಪು /ಕಾಡಿಗೆ ಇವುಗಳನ್ನು ನಾವು ಶಾಪ್‌ಗೆ ಹೋಗಿ ಖರೀದಿಸುತ್ತೇವೆ, ಆದರೆ ಹಿಂದೆಯಲ್ಲಾ ಈ ಕಾಡಿಗೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದರು.
ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಹೊರಗಡೆಯಿಂದ ಖರೀದಿಸಿದ ಕಾಜಲ್ ಅಥವಾ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ, ಅವರ ಪುಟ್ಟ ಕಣ್ಣುಗಳಿಗೆ ಯಾವುದೇ ರಾಸಾಯನಿಕ ಸೇರಿಸದ ಕಾಡಿಗೆ ಬಳಸಬೇಕು. ಅವರಿಗೆ ಮನೆಯಲ್ಲಿಯೇ ತಯಾರಿಸಿದ ಕಾಡಿಗೆ ತುಂಬಾನೇ ಸುರಕ್ಷಿತ.ಸಾಮಾಜಿಕ ತಾಣದಲ್ಲಿ ಒಬ್ಬರು 100 ವರ್ಷ ಹಿಂದೆ ಕಾಡಿಗೆ ಹೀಗೆ ತಯಾರಿಸುತ್ತಿದ್ದರು ಎಂವ ವೀಡಿಯೋ ಮಾಡಿ ಹಾಕಿದ್ದು ಆ ವೀಡಿಯೋ ವೈರಲ್ ಆಗಿದೆ. ಅವರು ಬರೀ ನಾಲ್ಕೇ ಸಾಮಗ್ರಿ ಬಳಸಿ ಕಾಡಿಗೆ ಮಾಡಿದ್ದಾರೆ ನೋಡಿ:
ಬೇಕಾಗುವ ಸಾಮಗ್ರಿ
ಹತ್ತಿ
ಅಜ್ವೈನ್
ಸಾಸಿವೆಯೆಣ್ಣೆ
ತುಪ್ಪ
ಈ ಕಾಡಿಗೆ ಮಾಡುವುದು ಹೇಗೆ?
- ಕಾಡಿಗೆ ಮಾಡುವ ಮೊದಲು ಹಣತೆಗೆ ಹತ್ತಿಯನ್ನು ಹಾಕಿ, ನಂತರ ತುಪ್ಪ ಸುರಿಯಿರಿ.
- ಆ ಹಣತೆ ನಾಲ್ಕು ಭಾಗದಲ್ಲಿ ಎತ್ತರದ ನಾಲ್ಕು ಲೋಟ ಇಟ್ಟು ಅದರ ಮೇಲೆ ತಟ್ಟೆಯನ್ನು ಮಗುಚಿ ಹಾಕಬೇಕು. ದೀಪ ಬಟ್ಟಲು ಮುಟ್ಟಬಾರದು, ಆದ್ದರಿಂದ ಬಟ್ಟಲು ಸ್ವಲ್ಪ ಮೇಲಿಡಿ. ಹಾಗಂತ ನೀವು ದೂರನೂ ಇಡಬಾರದು.
- ನೀವು ಎಣ್ಣೆ ಹಾಕುತ್ತಾ 30 ನಿಮಿಷ ದೀಪ ಉರಿಸಿ, ಹೆಚ್ಚು ಕಾಡಿಗೆ ಬೇಕೆಂದರೆ ಹೆಚ್ಚು ಹೊತ್ತು ಉರಿಸಬೇಕು.
- ನಂತರ ದೀಪವನ್ನು ಆರಿಸಿ ಅಥವಾ ಆರುವವರೆಗೆ ಕಾದು ನಂತರ ಪ್ಲೇಟ್ ಅನ್ನು ಮಗುಚಿ ಇಡಿ. ಬಿಸಿ ಇರುವಾಗ ಮುಟ್ಟಬೇಡಿ.
- ನಂತರ ಪ್ಲೇಟ್‌ನಲ್ಲಿದ್ದ ಮಸಿಯನ್ನು ಚಮಚದ ಸಹಾಯದಿಂದ ತೆಗೆಯಿರಿ. ಅದನ್ನು ಡಬ್ಬದಲ್ಲಿ ಹಾಕಿ 1 ಚಮಚ ಸಾಸಿವೆಯೆಣ್ಣೆ ಹಾಕಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ಕಾಜಲ್ ರೆಡಿ.
- ನೀವು ಸಾಸಿವೆಯೆಣ್ಣೆ ಬದಲಿಗೆ ಕೊಬ್ಬರಿಯೆಣ್ಣೆ, ಹರಳೆಣ್ಣೆ ಕೂಡ ಹಾಕಬಹುದು.
- ಈ ಕಾಡಿಗೆ ಬಳಸಿದರೆ ಹರಡುವೂದೂ ಇಲ್ಲ.
- ಈ ಕಾಡಿಗೆ ಬಳಸಿದರೆ ಹರಡುವೂದೂ ಇಲ್ಲ.
- ಹರಳೆಣ್ಣೆ ಕಣ್ಣಿಗೆ ತುಂಬಾ ತಂಪಾಗಿರುವುದರಿಂದ ಇದನ್ನು ಬಳಸಿದರೆ ಉಪಯುಕ್ತವಾಗಿರುತ್ತದೆ.
- ಈ ಕಾಡಿಗೆಯನ್ನು ಬಳಸುವುದರಿಂದ ಕಣ್ಣಿಗೆ ಒಳ್ಳೆಯ ನಿದ್ದೆ ಬರುತ್ತದೆ.
- ಹರಳೆಣ್ಣೆ, ತುಪ್ಪ ಬಳಸುವುದರಿಂದ ಕಣ್ಣು ಉರಿಯುವುದಿಲ್ಲ
- ಬಾದಾಮಿ ಪೌಷ್ಠಿಕಾಂಶದಿಂದ ಕೂಡಿದ್ದು ಇದರ ಬಳಕೆ ಕಣ್ಣಿಗೆ ಉತ್ತಮ.
- ಈ ಕಾಡಿಗೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
- ಕಾಡಿಗೆಯನ್ನು ಬಳಸಿದ ತಕ್ಷಣ ಕಣ್ಣುಗಳನ್ನು ಕೈಯಿಂದ ಉಜ್ಜಬಾರದು. ಇದರಿಂದ ಮೇಕಪ್ ಹಾಳಾಗುತ್ತದೆ.
- ಮುಖದ ಮೇಕಪ್ ಎಲ್ಲಾ ಮುಗಿದ ನಂತರ ಕಾಡಿಗೆ ಬಳಸುವುದು ಉತ್ತಮ.
- ಕನ್ನಡ ಹಾಕುವುದಾದರೆ ತೆಳುವಾಗಿ ಕಾಡಿಗೆ ಹಚ್ಚಿಕೊಳ್ಳಬಾರದು.
- ಕಾಡಿಗೆಯನ್ನು ಕೈಯಿಂದ ಹಚ್ಚುವಾಗ, ಕೈಯನ್ನು ಶುದ್ದವಾಗಿಟ್ಟುಕೊಳ್ಳಬೇಕು.
- ಈ ರೀತಿ ಕಾಡಿಗೆಯನ್ನು ಯಾವುದೇ ಭಯವಿಲ್ಲದೆ ಕಣ್ಣಿಗೆ ಹಾಕಬಹುದು, ಮಕ್ಕಳಿಗೆ ಇದು ತುಂಬಾನೇ ಸುರಕ್ಷಿತ, ಅಲ್ಲದೆ ಇದನ್ನು ಮಾಡುವುದೇನೂ ದೊಡ್ಡ ಶ್ರಮವಲ್ಲ, ಆದ್ದರಿಂದ ಈ ಕಾಡಿಗೆ ಟ್ರೈ ಮಾಡಿ ನೋಡಬಹುದು.
ಕಾಡಿಗೆ ಈ ರೀತಿ ಕೂಡ ತಯಾರಿಸಿಬಹುದು
ದೀಪಕ್ಕೆ ಹತ್ತಿಯ ಬತ್ತಿ ಹಾಕಿ, ನಂತರ ಹರಳೆಣ್ನೆ ಹಾಕಿ, ದೀಪವನ್ನು ಹೊತ್ತಿಸಿ, ಇದರ ಶಾಖದಲ್ಲಿ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಂಪೂರ್ಣವಾಗಿ ಸುಡಬೇಕು. ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ನಂತರ ಅದನ್ನು ನುಣ್ಣಗೆ ಪುಡಿ ಮಾಡಿ ಆ ಪುಡಿಯನ್ನು ಡಬ್ಬದಲ್ಲಿ ತುಂಬಿ, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.
ಈ ಕಾಡಿಗೆ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು?