ಗಡ್ಚಿರೋಲಿ : ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದಕ್ಕೆ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿದ್ದಾರೆ.
ಮಹಾರಾಷ್ಟ್ರ: ಇಬ್ಬರ ಮತಕ್ಕಾಗಿ 107 ಕಿ.ಮೀ ತೆರಳಿದ ಚುನಾವಣಾ ಅಧಿಕಾರಿಗಳು
0
ಏಪ್ರಿಲ್ 13, 2024
Tags
ಗಡ್ಚಿರೋಲಿ : ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದಕ್ಕೆ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿದ್ದಾರೆ.
ಮತದಾನ ಮಾಡಲಿರುವ ವೃದ್ಧರು ಗಡ್ಚಿರೋಲಿ- ಚಿಮುರ್ ಲೋಕಸಭಾ ಕ್ಷೇತ್ರದ 100 ಮತ್ತು 86 ವರ್ಷದವರು. ಈ ಕ್ಷೇತ್ರದಲ್ಲಿ ಏ. 19ರಂದು ಮತದಾನ ನಡೆಯಲಿದೆ.
ಈ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತ್ತು 40 ಪ್ರತಿಶತದಷ್ಟು ಅಂಗವಿಕಲರಾಗಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರಡಿಯಲ್ಲಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ಸಾಗಿ 100 ವರ್ಷದ ಕ್ಷಿತಯ್ಯ ಮಡರ್ಬೋಯಿನಾ ಮತ್ತು 86 ವರ್ಷದ ಕ್ಷಿತಯ್ಯ ಕೊಮೆರಾ ಎನ್ನುವವರಿಂದ ಮತ ಚಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಗಡ್ಚಿರೋಲಿ ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.