HEALTH TIPS

ಒಟ್ಟಿಗೆ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ-ಮಗಳು!

            ಗುವಾಹತಿ: ವಿವಾಹವಾಗಿ ಶಿಕ್ಷಣ ತೊರೆದು ಹದಿನಾರು ವರ್ಷಗಳ ಬಳಿಕ ಮತ್ತೆ ಓದುವ ಹಂಬಲದಿಂದ ಅಧ್ಯಯನ ನಡೆಸಿದ 34 ವರ್ಷದ ಮಹಿಳೆಯೊಬ್ಬರು ತಮ್ಮ ಹದಿಹರೆಯದ ಪುತ್ರಿಯ ಜತೆಗೆ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.

              ಬಿಸ್ವನಾಥ್ ಜಿಲ್ಲೆಯ ಸಿಲಮರಿ ಗ್ರಾಮದ ಮಝಿಯಾ ಖಟೂಮ್ ಶೇಕಡ 49 ಅಂಕ ಪಡೆದು ಉತ್ತೀರ್ಣರಾಗಿದ್ದರೆ, ಅವರ ಪುತ್ರಿ ಅಫ್ಸಾನಾ (16) ಶೇಕಡ 52 ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

               ಸ್ಥಳೀಯ ಎಫ್.ಎ.ಅಹ್ಮದ್ ಹೈಸ್ಕೂಲ್‍ನಲ್ಲಿ ಇಬ್ಬರೂ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

                ಹಿಂದೆ ಮಝಿಯಾ ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಆದರೆ ವಿವಾಹದಿಂದಾಗಿ ಅವರ ನಿರೀಕ್ಷೆ ಈಡೇರಿರಲಿಲ್ಲ. ಬಳಿಕ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಲಾರಂಭಿಸಿದರು.

              ಆದರೆ ಮುಂದೆ ಓದು ಮುಂದುವರಿಸುವ ಇಚ್ಛೆ ತಮಗಿಲ್ಲ ಎಂದು ಮಝಿಯಾ ಶನಿವಾರ ಹೇಳಿದ್ದಾರೆ. ಮಕ್ಕಳು ಮಾತ್ರ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎನ್ನುವುದೇ ತನ್ನ ಬಯಕೆ ಎಂದು ಸ್ಪಷ್ಟಪಡಿಸಿದ್ದಾರೆ. "ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗುವಷ್ಟು ಪ್ರತಿಭೆ ನನ್ನಲ್ಲಿದೆ ಎಂದು ತೋರಿಸುವುದು ನನ್ನ ಉದ್ದೇಶವಾಗಿತ್ತು. ಏಳು ಮಂದಿ ಸಹೋದರ- ಸಹೋದರಿಯರ ಪೈಕಿ ನಾನು ಒಬ್ಬಳು. 2006ರಲ್ಲಿ ನಮ್ಮ ಕುಟುಂಬದವರು ನನಗೆ ಸೂಕ್ತ ವರನನ್ನು ಹುಡುಕಿ ವಿವಾಹ ಮಾಡಿಕೊಟ್ಟರು. ಆದರೆ ಮುಂದೆ ಎಲ್ಲ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಪೂರ್ಣಗೊಳ್ಳುವವರೆಗೂ ಮಕ್ಕಳ ವಿವಾಹಕ್ಕೆ ಕಾಯಬೇಕು ಎನ್ನುವುದು ನನ್ನ ನಿರೀಕ್ಷೆ" ಎಂದು ಹೇಳಿದರು.

                ಬಹಳಷ್ಟು ಅಂಗನವಾಡಿ ಕಾರ್ಯಕರ್ತೆಯರು ಹತ್ತನೇ ತರಗತಿ ಉತ್ತೀರ್ಣರಾದವರು. ಆದರೆ ಗ್ರಾಮದಲ್ಲಿ ಆ ವೇಳೆಗೆ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಮಝಿಯಾ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಈ ಹುದ್ದೆಗೆ ಆಯ್ಕೆಯಾಗಿದ್ದರು. "ಯಾರೂ ನನ್ನ ತಾಯಿಯನ್ನು ಅಣಕಿಸುತ್ತಿರಲಿಲ್ಲ. ಒಂದು ದಶಕದ ಹಿಂದೆ ಗ್ರಾಮದಲ್ಲಿ ಒಬ್ಬ ಪದವೀಧರರನ್ನು ಕೂಡಾ ಕಾಣದ ಗ್ರಾಮದಲ್ಲಿ ಎಲ್ಲರೂ ತಾಯಿಯ ಶಿಕ್ಷಣಕ್ಕೆ ಉತ್ತೇಜನ ನೀಡಿದರ. ಈಗ ಬಹಳಷ್ಟು ಮಂದಿ ಸುಶಿಕ್ಷಿತರಿದ್ದಾರೆ" ಎಂದು ಅಫ್ಸಾನಾ ವಿವರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries