ಕಾಸರಗೋಡು: ನಾಳೆ(ಏ.26) ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲು 10 ಬೆಟಾಲಿಯನ್ ಕೇಂದ್ರ ಪಡೆ ಕಾಸರಗೋಡಿಗೆ ಆಗಮಿಸಿದೆ. 10 ಬೆಟಾಲಿಯನ್‍ಗಳಲ್ಲಾಗಿ 850 ಸಿಬಂದಿಗಳಿದ್ದಾರೆ. ಇವರನ್ನು ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಾಗಿ ಕರ್ತವ್ಯಕ್ಕಾಗಿ ನೇಮಿಸಲಾಗುವುದು. ಸೂಕ್ಮ ಸಂವೇದಿ ಪ್ರದೇಶಗಳ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಇದಲ್ಲದೆ ಅನ್ಯ ರಾಜ್ಯಗಳ ಸಶಸ್ತ್ರ ಪೆÇಲೀಸ್ ಪಡೆಯನ್ನು ಕಾಸರಗೋಡಿಗೆ ಕರೆಸಲಾಗುವುದು.