HEALTH TIPS

ಆ್ಯಂಟಿ ಡಿಫೇಸ್‍ಮೆಂಟ್ ಕಾರ್ಯಚರಣೆ-ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿನ 11181 ಪ್ರಚಾರ ಸಾಮಗ್ರಿ ತೆರವು


            ಕಾಸರಗೋಡು: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗಿದ್ದ ಆ್ಯಂಟಿ ಡಿಫೇಸ್‍ಮೆಂಟ್ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅಕ್ರಮವಾಗಿ ಅಳವಡಿಸಿದ್ದ 11181 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

               ಸಾರ್ವಜನಿಕ ಸ್ಥಳಗಳಿಂದ 11067 ಪ್ರಚಾರ ಸಾಮಗ್ರಿಗಳನ್ನು ತೆಗೆಯಲಾಗಿದೆ. ಆ್ಯಂಟಿ ಡಿಫೇಸ್‍ಮೆಂಟ್ ಸ್ಕ್ವಾಡ್‍ಗಳು ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃಥವಾಗಿ ಇರಿಸಲಾಗಿರುವ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿ ಅಳವಡಿಸಲಾದ ಬಹುತೇಕ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಇವುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾದ 600 ಗೋಡೆಬರಹಗಳು,  7934 ಭಿತ್ತಿಪತ್ರಗಳು,  796 ಬ್ಯಾನರ್‍ಗಳು, 1542 ಧ್ವಜಗಳು ಮತ್ತು ಧ್ವಜಸ್ತಂಬ ಇತ್ಯಾದಿ ಒಳಗೊಂಡಿದೆ.

              ಅಲ್ಲದೆ, ಜಾಗದ ಮಾಲೀಕರ ಅನುಮತಿಯಿಲ್ಲದೆ ಖಾಸಗಿ ಹಿತ್ತಿಲಲ್ಲಿ ಅಳವಡಿಸಲಾದ ಯಾವುದೇ ಪ್ರಚಾರ ಸಾಮಗ್ರಿಗಳನ್ನು ದೂರಿನ ಆಧಾರದ ಮೇಲೆ ತೆಗೆದುಹಾಕಲಾಗುತ್ತಿದ್ದು, ಈ ರೀತಿಯಾಘಿ 92 ಭಿತ್ತಿಪತ್ರಗಳು, 11 ಫ್ಲಕ್ಸ್‍ಗಳು ಮತ್ತು 11 ಧ್ವಜಸ್ತಂಭಗಳು ಸೇರಿದಂತೆ 114 ಪ್ರಚಾರ ಸಾಮಗ್ರಿಗಳನ್ನು ವಿಶೇಷ ತಂಡ ತೆರವುಗೊಳಿಸಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries