ಭುವನೇಶ್ವರ: ಒಡಿಶಾದಲ್ಲಿ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯಲಿದ್ದು, ವಿವಿಧ ರಾಜಮನೆತನಗಳಿಗೆ ಸೇರಿದ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಭುವನೇಶ್ವರ: ಒಡಿಶಾದಲ್ಲಿ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯಲಿದ್ದು, ವಿವಿಧ ರಾಜಮನೆತನಗಳಿಗೆ ಸೇರಿದ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ರಾಜಮನೆತನಕ್ಕೆ ಸೇರಿದ 8 ಅಭ್ಯರ್ಥಿಗಳನ್ನು ಆಡಳಿತಾರೂಢ ಬಿಜು ಜನತಾ ದಳ ಕಣಕ್ಕಿಳಿಸಿದರೆ, ಬಿಜೆಪಿ 3 ಮತ್ತು ಕಾಂಗ್ರೆಸ್ ಒಬ್ಬ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದೆ.
ಸನಾಖೆಮುಂಡಿ ವಿಧಾನಸಭಾ ಕ್ಷೇತ್ರದಿಂದ ಧಾರಾಕೋಟೆ ರಾಜಮನೆತನದ ಸುಲಕ್ಷಣ ಗೀತಾಂಜಲಿ ದೇವಿ ಅವರಿಗೆ ಬಿಜೆಡಿ ಟಿಕೆಟ್ ಘೋಷಿಸಿದೆ. ಚಿಕಿಟಿ ವಿಧಾನಸಭಾ ಕ್ಷೇತ್ರದಿಂದ ಚಿಕಿಟಿ ರಾಜಮನೆತನಕ್ಕೆ ಸೇರಿದ ಚಿನ್ಮಯಾನಂದ ಶ್ರೀರೂಪ್ ದೇವ್ ಅವರಿಗೆ ಟಿಕೆಟ್ ನೀಡಿದೆ. ಅಂಗುಲ್ ರಾಜಮನೆತನದ ಸದಸ್ಯೆ ಸಂಜುಕ್ತಾ ಸಿಂಗ್ ಅವರಿಗೂ ಬಿಜೆಡಿ ಟಿಕೆಟ್ ಘೋಷಿಸಿದೆ.
ಕಲಹಂಡಿ ರಾಜ ಕುಟುಂಬದ ಸದಸ್ಯೆ ಮಾಳವಿಕಾ ಕೇಶರಿ ದೇವ್ ಅವರಿಗೆ ಕಲಹಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಿಸಿದೆ. ಬೋಲಂಗಿರ್ ರಾಜಮನೆತನದ ಸಂಗೀತಾ ಕುಮಾರಿ ಸಿಂಗ್ ದೇವ್ ಅವರಿಗೆ ಬೋಲಂಗಿರ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ.
ಡೆಂಕನಾಲ್ ರಾಜಮನೆತನದ ಸದಸ್ಯೆ ಸುಸ್ಮಿತಾ ಸಿಂಗ್ ದೇವ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಒಡಿಶಾದ 21 ಲೋಕಸಭಾ ಕ್ಷೇತ್ರ ಮತ್ತು 147 ವಿಧಾನಸಭಾ ಕ್ಷೇತ್ರಗಳಿಗೆ ಮೇ 13 ರಿಂದ ಜೂನ್ 1ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.