ಪಾಲ್ಘರ್: ಕರ್ನಾಟಕದಿಂದ ಗುಜರಾತ್‌ಗೆ ಸಾಗಣೆ ಮಾಡಬೇಕಾಗಿದ್ದ ₹1.2 ಕೋಟಿ ಮೌಲ್ಯದ ಗೋಡಂಬಿಯನ್ನು ಕದ್ದೊಯ್ದಿದ್ದು, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಪ್ರಕರಣ ಭೇದಿಸಿ, ಗೋಡಂಬಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉಡುಪಿ ಮೂಲದ ಪೂರೈಕೆದಾರರೊಬ್ಬರು ಏಪ್ರಿಲ್ 2ರಂದು ₹24.63 ಮೆಟ್ರಿಕ್ ಟನ್ ಗೋಡಂಬಿಯನ್ನು ಸೂರತ್ ಮತ್ತು ಅಹಮದಾಬಾದ್‌ಗೆಂದು ಕಳುಹಿಸಿದ್ದರು.
ಹೀಗಾಗಿ, ಕರ್ನಾಟಕ ಪೊಲೀಸರು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ನೆರವು ಕೋರಿದ್ದರು. ಗೋಡಂಬಿಯು ನಾಲಸೋಪಾರ ಮತ್ತು ನವಮುಂಬೈನ ಎರಡು ಗೋದಾಮಿನಲ್ಲಿ ಇರುವುದನ್ನು ಪಾಲ್ಘರ್ ಪೊಲೀಸರು ಪತ್ತೆ ಮಾಡಿದರು ಎಂದು ತಿಳಿಸಿದರು.
'ಸದ್ಯ ₹92.7 ಲಕ್ಷ ಮೌಲ್ಯದ ಗೋಡಂಬಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನ ಮತ್ತು ಬಾಕಿ ಗೋಡಂಬಿ ವಶಕ್ಕೆ ಪ್ರಯತ್ನಿಸಲಾಗುತ್ತಿದೆ' ಎಂದು ಹಿರಿಯ ಇನ್‌ಸ್ಪೆಕ್ಟರ್ ರಾಹುಲ್ ರಕ್ಷಾ ತಿಳಿಸಿದರು.